ಮಡಿಕೇರಿ, ಆ. 15: ಭಾರತದ 73ನೇ ಸ್ವಾತಂತ್ರ್ಯೋತ್ಸವವನ್ನು ನಗರದ ಗಾಂಧಿ ಮೈದಾನದ ಗಾಂಧಿ ಪ್ರತಿಮೆ ಎದುರು ಸಿ.ಎನ್.ಸಿ. ವತಿಯಿಂದ ಆಚರಿಸಲಾಯಿತು. ಸಂಘಟನೆ ಮುಖ್ಯಸ್ಥ ಎನ್.ಯು. ನಾಚಪ್ಪ ನೇತೃತ್ವದಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ ದಿನದ ಮಹತ್ವ ಹಾಗೂ ಕೊಡವರ ಹಕ್ಕುಗಳ ರಕ್ಷಣೆ ಕುರಿತು ಸಂದೇಶ ನೀಡಲಾಯಿತು. ಈ ಸಂದರ್ಭ ಪ್ರಮುಖರಾದ ಕಲಿಯಂಡ ಪ್ರಕಾಶ್, ಚಂಬಂಡ ಜನತ್‍ಕುಮಾರ್, ಕಲಿಯಂಡ ಮೀನ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಳಮಂಡ ಜಯ, ಪುದಿಯೊಕ್ಕಡ ಕಾಶಿ, ಕೊಂಗೇಟಿರ ಲೋಕೇಶ್ ಭಾಗವಹಿಸಿದ್ದರು.