ಮಡಿಕೇರಿ, ಆ. 14: ವೀರಾಜಪೇಟೆ ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ವಾಸದ ಮನೆಗಳಿಗೆ ಪರಿಹಾರ ನೀಡುವ ಸಂಬಂಧ ಗ್ರಾಮ ಲೆಕ್ಕಿಗರು ತಾ. 15 ರಂದು (ಇಂದು) ಸಮೀಕ್ಷಾ ಕಾರ್ಯ ಕೈಗೊಂಡಿದ್ದು, ಸಾರ್ವಜನಿಕರು ಯಾವದಾದರೂ ವಾಸದ ಮನೆಗಳು ಮಳೆಯಿಂದ ಹಾನಿಗೊಳಗಾಗಿದ್ದಲ್ಲಿ ಸಂಬಂಧಿಸಿದ ಗ್ರಾಮ ಲೆಕ್ಕಿಗರು ಮತ್ತು ರಾಜ್ಯಸ್ವ ನಿರೀಕ್ಷಕರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿ ಸಹಕರಿಸುವಂತೆ ತಹಶೀಲ್ದಾರರು ಕೋರಿದ್ದಾರೆ.