ಕೂಡಿಗೆ, ಆ. 14: ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ನದಿ ನೀರಿನ ಮಟ್ಟ ಹೆಚ್ಚಳವಾದ ಪರಿಣಾಮ ಕುಶಾಲನಗರ ಹೋಬಳಿ ವ್ಯಾಪ್ತಿಯ ಮನೆಗಳು ನೆಲಕಚ್ಚಿವೆ. ಇದೀಗ ಮಳೆ ಕಡಿಮೆಯಾಗಿದ್ದರೂ ಕೂಡ ಮನೆಗಳು ಬೀಳುವದು ಮಾತ್ರ ನಿಂತಿಲ್ಲ.
ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆ ನಿಂತಿದ್ದರೂ, ನಾಲ್ಕು ಮನೆಗಳು ಇದೀಗ ನೆಲಕಚ್ಚಿವೆ. ಕೂಡಿಗೆಯ ಕೆ.ಎಂ.ಮೋಹನ್, ಗೌರಮ್ಮ sಸಣ್ಣಶೆಟ್ಟಿ, ಕೂಡು ಮಂಗಳೂರಿನ ಮಂಜುನಾಯಕ್ ಅವರ ಮನೆಗಳು ಮುರಿದು ಬಿದ್ದಿವೆ.
ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ, ಕೂಡಿಗೆ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್‍ಕುಮಾರ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಗ್ರಾಮ ಲೆಕ್ಕಿಗ ಗುರುದರ್ಶನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲಾ ಪಂಚಾಯ್ತಿಗೆ ಮಾಹಿತಿಯನ್ನು ತಿಳಿಸಿ, ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿ ತಕ್ಷಣವೇ ಮನೆ ಮಂಜೂರು ಮಾಡಿ, ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.