ಮಡಿಕೇರಿ, ಆ. 15: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭ ದಿಂದ ಇಂದಿನ ತನಕ ಸರಾಸರಿ 80 ಇಂಚು ಮಳೆ ಆಗಿದೆ. ಕಳೆದ ವರ್ಷ ಈ ಅವಧಿಗೆ 126.44 ಇಂಚು ದಾಖಲಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ವರ್ಷಾರಂಭದಿಂದ ಇದುವರೆಗೆ ಸರಾಸರಿ 103.77 ಇಂಚು ಹಾಗೂ ಹಿಂದಿನ ಅವಧಿಯಲ್ಲಿ 178.11 ಇಂಚು ಮಳೆ ದಾಖಲಾಗಿತ್ತು.ವೀರಾಜಪೇಟೆ ತಾಲೂಕಿನಲ್ಲಿ ವರ್ಷಾರಂಭದಿಂದ ಇದುವರೆಗೆ ಸರಾಸರಿ 81.05 ಇಂಚು ಮಳೆಯಾ ಗಿದ್ದು; ಕಳೆದ ವರ್ಷ ಈ ವೇಳೆಗೆ 98.75 ಇಂಚು ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ಅವಧಿಗೆ 52.25 ಇಂಚು ದಾಖ ಲಾಗಿತ್ತು; ಕಳೆದ ಸಾಲಿನಲ್ಲಿ ಇಂದಿಗೆ 101.59 ಇಂಚು ಮಳೆಯಾಗಿತ್ತು.

ಹಾರಂಗಿ ಭರ್ತಿ: ಹಾರಂಗಿ ಜಲಾಶಯದ ಗರಿಷ್ಠ 2859 ಅಡಿ ನೀರಿಗಿಂತ ಪ್ರಸಕ್ತ 2857.87 ಅಡಿ ನೀರಿನ ಮಟ್ಟ ಕಾಯ್ದುಕೊಂಡು ಅಧಿಕ ನೀರು ಹೊರಬಿಡಲಾಗಿದೆ.