ಭಾಗಮಂಡಲ: ಅಯ್ಯಂಗೇರಿ ಬಾರಿಕೆ ಐನ್‍ಮನೆ ಮತ್ತು ಗೊಲ್ಲರಕೇರಿಗೆ ಹೋಗುವ ರಸ್ತೆಯಲ್ಲಿ ಸೇತುವೆ ಕುಸಿದು 70ಕ್ಕೂ ಅಧಿಕ ಮನೆಗಳಿಗೆ ವಾಹನ ಸಂಚಾರ ಇಲ್ಲದೆ 10 ದಿನಗಳಿಂದ ತೊಂದರೆ ಆಗುತ್ತಿದೆ.

-ಸುನಿಲ್.ಕುಶಾಲನಗರ ವಿವೇಕಾನಂದ ಬಡಾವಣೆ 3ನೇ ಬ್ಲಾಕ್‍ನಲ್ಲಿ ನೀರಿಗಾಗಿ ಪರದಾಟ. -ಸಿದ್ದರಾಜು, ಕುಶಾಲನಗರ.ಮೊಗರ ಬಡಾವಣೆ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಹಣ ಬಿಡುಗಡೆ ಮಾಡಿಸಲಾಗುವುದು, ಈ ಸಂಬಂಧ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಪ.ಪಂ. ಮುಖ್ಯಾಧಿಕಾರಿಗೆ ತಿಳಿಸಿದರು.ವೀರಾಜಪೇಟೆ ಪಟ್ಟಣದ ಕೀರ್ತಿ ಮತ್ತು ಮೊಗರ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಕೀರ್ತಿ ಮತ್ತು ಮೊಗರ ಬಡಾವಣೆಯಲ್ಲಿ ಕುಸಿಯುತ್ತಿರುವ ತಡೆಗೋಡೆ ವೀಕ್ಷಣೆ ಮಾಡಿದರು.ತೋಡಲ್ಲ... ರಸ್ತೆ...

ಪೇರೂರು ಗ್ರಾಮದಲ್ಲಿ ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ಹರಿದು ನೋಡಿನಂತಾಗಿದೆ.

- ಆರ್ಯನ್, ಬೊಟ್ಟೋಳಂಡತೋಟ ಮುಳುಗಡೆ

ಅರಪಟ್ಟು ಗ್ರಾಮದ ಮುಕ್ಕಾಟಿರ ಸೋಮಯ್ಯ ಅವರ ತೋಟ ಮುಳುಗಡೆಯಾಗಿ ನಷ್ಟ ಸಂಭವಿಸಿದೆ.

- ದಿವಿನ್ ಮುಕ್ಕಾಟಿರಗದ್ದೆ ಜಲಾವೃತ

ಅವಂದೂರು ಗ್ರಾಮದಲ್ಲಿ ನಾಟಿ ಮಾಡಿದ್ದ ಗದ್ದೆ ಜಲಾವೃತಗೊಂಡಿರುವದು.

- ಚೊಕ್ಕಾಡಿ ಪ್ರೇಮ