ಕುಶಾಲನಗರ, ಆ. 15: ಕುಶಾಲನಗರದ ಸೇಕ್ರೆಡ್ ಹಾರ್ಟ್ ಪತ್ತಿನ ಸಹಕಾರ ಸಂಘದ ಪ್ರಥಮ ವಾರ್ಷಿಕ ಮಹಾಸಭೆ ಸ್ಥಳೀಯ ಮಿಸ್ಟ್ ಫ್ಲವರ್ ಸಭಾಂಗಣದಲ್ಲಿ ನಡೆಯಿತು.ಸಂಘದ ಮುಖ್ಯ ಪ್ರವರ್ತಕರಾದ ಆಲ್ವರ್ಟ್ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ನೊಂದಾಯಿತ ಬೈಲಾ ಓದಿ ಅನುಮೋದನೆ ಪಡೆಯಲಾಯಿತು. 2019-20 ರ ಸಾಲಿಗೆ ಅಂದಾಜು ಆದಾಯ ಮತ್ತು ಖರ್ಚುಗಳ ವರದಿ ವಾಚಿಸಿ ಅನುಮೋದನೆ ಪಡೆಯಲಾಯಿತು. ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.