ಚೆಟ್ಟಳ್ಳಿ, ಆ. 15: ಉತ್ತರ ಗೋವಾದಲ್ಲಿ ಈ ವರ್ಷ ನಡೆದ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ -2019 ಸೀಜóನ್ 6ನಲ್ಲಿ ಕೋಡ್ರೈವರಾಗಿ ಮಿಂಚಿದ ಕೊಡಗಿನ ಯುವ ರ್ಯಾಲಿಪಟು ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಓವರಾಲ್‍ನಲ್ಲಿ ಪ್ರಥಮ ಸ್ಥಾನ ಪÀಡೆದಿದ್ದಾನೆÉ.

ತಾ. 3 ರಿಂದ ತಾ. 10 ರವರೆಗೆ ಅಂತರ್ರಾಷ್ಟ್ರೀಯಮಟ್ಟದ ರೈನ್ ಫಾರೆಸ್ಟ್ ಚಾಲೆಂಜ್ ಆಫ್ ರೋಡ್‍ನಲ್ಲಿ 10ನೇ ಸ್ಥಾನ ಹೊಂದಿರುವ ರೈನ್ ಫಾರೆಸ್ಟ್ ಚಾಲೇಂಜ್ ಇಂಡಿಯಾ-2019ನ್ನು ಈ ಬಾರಿ ಉತ್ತರ ಗೋವಾದಲ್ಲಿ ಆಯೋಜಿಸಲಾಗಿತ್ತು. 26 ವಿಧÀದ ಆಫ್ ರೋಡ್ ರ್ಯಾಲಿ ಕ್ರೀಡೆಯ ಸಾಹಸಮಯ ಹಂತಗಳಿದ್ದವು. ಕೊಡಗಿನಂತೆ ಗೋವಾದಲ್ಲೂ ಮಳೆಯ ರಭಸವಿದ್ದು, ಹೊಳೆಗಳು ತುಂಬಿ ತುಳುಕುತ್ತಿದ್ದವು ಅದರೊಳಗೆÉ ಜೀಪನ್ನು ಧೈರ್ಯ ಹಾಗೂ ಸಾಹಸದೊಂದಿಗೆ ಚಾಲಿಸಬೇಕಿತ್ತು, ಕಲ್ಲುಬಂಡೆಗಳ ಕಿರಿದಾದ ರಸ್ತೆಗಳು, ಹೂತುಹೋಗುವ ಕೆಸರಿನಿಂದ ತುಂಬಿದ ರಸ್ತೆಗಳು, ಬೆಟ್ಟ ಗುಡ್ಡಗಳ ಮೇಲೆಲ್ಲ ಚಲಿಸಬೇಕಿತ್ತು. ಈ ಸಾಹಸ ಹಾಗೂ ರೋಚಕ ರ್ಯಾಲಿ ಕ್ರೀಡೆಯಲ್ಲಿ 40 ನುರಿತ ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಅನುಭವಿ ರ್ಯಾಲಿಪಟುಗಳು ಭಾಗವಹಿಸಿದ್ದರು. ಚಂಡಿಗಡ್‍ನ ಗುರುಮೀತ್ ವಿರ್ದಿ (ಡ್ರೈವರ್) ರ್ಯಾಲಿಪಟುವಿನೊಂದಿಗೆ ಕೊಡಗಿನಿಂದ ಕೋಡ್ರೈವರಾಗಿ ಉದ್ದಪಂಡ ಚೇತನ್ ಚಂಗಪ್ಪ ಪ್ರತಿನಿಧಿಸಿದ್ದರು. ಒಟ್ಟಾಗಿ 26 ಹಂತಗಳಲ್ಲಿ 12 ಹಂತಗಳನ್ನು ಅತಿವೇಗÀವನ್ನು ಕಾಯ್ದುಕೊಂಡಿದ್ದರು. ಕಠಿಣಕರವಾದ 2ನೇ ಹಾಗೂ 4ನೇ ಹಂತದಲ್ಲಿ ಚಲಿಸುತ್ತಿದ್ದ ತಮ್ಮ ಜಿಪ್ಸಿ ತಲೆಕೆಳಗಾಗಿ ಮಗುಚಿಕೊಂಡಿತ್ತು. 15 ನಿಮಿಷಗಳೊಳಗಾಗಿ ಯಾರ ಸಹಾಯವಿಲ್ಲದೆ ವಿಂಚ್‍ಗಳ ಸಹಾಯದಿಂದ ಹರಸಾಹಸದೊಂದಿಗೆ ಜೀಪನ್ನು ಮೇಲೆತ್ತಿ ಸರಿಪಡಿಸಿ ಸಮಯವನ್ನು ಸರಿದೂಗಿಸಿಕೊಂಡು ಗುರಿತಲಪಿದ್ದು ರೋಚಕ ಅನುಭವವಾಗಿತ್ತೆÉಂದು ಚೇತನ್‍ಚಂಗಪ್ಪ ಹೇಳುತ್ತಾರೆ. 26 ಹಂತವನ್ನು ಮುಗಿಸಿದ್ದಾಗ ಹಲವು ಹಂತಗಳಲ್ಲೇ ಹೆಚ್ಚಿನ ವಾಹನಗಳು ಮಗುಚಿಕೊಂಡಿತು. ಕೆಲವೇ ಕೆಲವು ಜೀಪುಗಳು ಕೊನೆಯ ಹಂತ ತಲಪಲು ಸಾಧ್ಯವಾಯಿತು. ಜೀಪ್ ಚಾಲನೆಯ ರಭಸಕ್ಕೆ ಮಾರ್ಗದ ಅತ್ಯುತ್ತಮ ಮಾರ್ಗದರ್ಶನವನ್ನು ಚೇತನ್ ನೀಡಿದ ಫಲವಾಗಿ ಓವರಾಲ್‍ನಲ್ಲಿ ಪ್ರಥಮ ಹಾಗೂ 1600 ಸಿಸಿ-2000ಸಿಸಿ ಕೆಟಗರಿಯಲ್ಲಿ ಗುರುಮೀತ್ ವಿರ್ದಿ ಹಾಗೂ ಚೇತನ್‍ಚಂಗಪ್ಪ ಮೊದಲಿಗರಾದರು.

ಅಮ್ಮತ್ತಿಯ ಉದ್ದಪಂಡ ಶಂಭು ಕಾವೇರಪ್ಪ ಹಾಗೂ ಮಲ್ಲಿಗೆ ಕಾವೇರಪ್ಪನವರ ಮಗನಾಗಿರುವ ಚೇತನ್‍ಚಂಗಪ್ಪ ಅಂತರ್ರಾಷ್ಟ್ರೀಯ ಹಿರಿಯ ರ್ಯಾಲಿಪಟು ಮಾಳೇಟಿರ ಜಗತ್ ನಂಜಪ್ಪರೊಂದಿಗೆ ಹಲವು ರ್ಯಾಲಿಯಲ್ಲಿ ಭಾಗವಹಿಸಿದ್ದು, ಕಳೆದ ಮೂರು ಬಾರಿಯೂ ಗೋವಾದಲ್ಲಿ ಆಯೋಜಿಸಿದ್ದ ರೈನ್ ಫಾರೆಸ್ಟ್ ಚಾಲೆಂಜ್ ರ್ಯಾಲಿಯಲ್ಲಿ ಮಾಳೇಟಿರ ಜಗತ್ ನಂಜಪ್ಪ ಹಾಗೂ ಚೇತನ್ ಚಂಗಪ್ಪ ಜೋಡಿ 2017ರಲ್ಲಿ ಮೊದಲ ಕೆಟಗರಿ, ಓವರಾಲ್‍ನಲ್ಲಿ ಎರಡನೇ ಸ್ಥಾನ, 2018ರಲ್ಲಿ ಕೆಟಗರಿಯಲ್ಲಿ ಮೊದಲ ಹಾಗೂ ಓವರಾಲ್‍ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಚೆನ್ನೈನ ಪಾಲಾರ್ ಚ್ಯಾಲೆಂಜ್, ಮಹೇಂದ್ರ ಕ್ಲಬ್ ಚ್ಯಾಲೆಂಜ್, ಕಣ್ಣೂರಿನಲ್ಲಿ ಹಾಗೂ ಹಲವೆಡೆ ನಡೆದ ಆಫ್ ರೋಡ್ ರ್ಯಾಲಿಯಲ್ಲಿ ಸಾಹಸಮಯ ಪ್ರದರ್ಶನದÀ ಮೂಲಕ ಮೊದಲ ಸ್ಥಾನವನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಈ ವರ್ಷದ ಗೋವಾದ ರೈನ್ ಫಾರೆಸ್ಟ್ ಚಾಲೆಂಜ್ 2019ರ ಅಫಿಸಿಯಲ್ ಮಿಡಿಯಾ ಪರ್ಸನ್ನ್ ಆಗಿ ಅಮ್ಮತ್ತಿಯ ಕುಂಙ್ಞಂಡ ಮಾಚು ಮಾಚಯ್ಯ ಪ್ರತಿನಿಧಿಸಿದ್ದ ಆಫ್ ರೋಡ್ ಹಾಗೂ ರ್ಯಾಲಿಯಲ್ಲಿನ ರೋಚಕ ಕ್ಷಣದ ಛಾಯಾ ಗ್ರಹಣಕ್ಕಾಗಿ ಬಹುಮಾನ ಪಡೆದಿದ್ದಾರೆ. ರೈನ್ ಫಾರೆಸ್ಟ್ ಚಾಲೆಂಜ್‍ಇಂಡಿಯಾ-2019ದಲ್ಲಿ ಗೆದ್ದು ಟ್ರೋಫಿಯ ಜೊತೆಗೆ ನವೆಂಬರ್‍ನಲ್ಲಿ 28 ರಾಷ್ಟ್ರದಲ್ಲಿ ಗೆದ್ದು ಮಲೇಶಿಯಾದಲ್ಲಿ ಅಂತರ್ರಾಷ್ಟೀಯ ಮಟ್ಟದಲ್ಲಿ ನಡೆಯುವ ಮಲೇಷ್ಯಾ ರೈನ್ ಫಾರೆಸ್ಟ್ ಚಾಲೆಂಜ್‍ನಲ್ಲಿ ಯುವ ರ್ಯಾಲಿಪಟು ಉದ್ದಪಂಡ ಚೇತನ್‍ಚಂಗಪ್ಪ ಹಾಗೂ ಗುರುಮೀತ್‍ವಿರ್ದಿ ಜೋಡಿ ಪ್ರತಿನಿಧಿಸಲಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ