ಮಡಿಕೇರಿ, ಆ. 15: ಬೆಂಗಳೂರಿನ ವೆಲ್ನೆಸ್ ಮಿಷನ್ ವತಿಯಿಂದ ಮಡಿಕೇರಿಯಲ್ಲಿ ತಾ. 17 ರಂದು ಶಕ್ತಿವೇದ ಪರಿವರ್ತನ ಯೋಗ ಶಿಬಿರ ಆಯೋಜಿತವಾಗಿದೆ. ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಅಂದು ಸಂಜೆ 4.30 ಗಂಟೆಗೆ ಒಂದು ದಿನದ ಯೋಗ ಶಿಬಿರ ಪ್ರಾರಂಭವಾಗಲಿದ್ದು, ನಡಿಕೇರಿಯಂಡ ಸ್ವಾತಿ ಮಂದಣ್ಣ ಪರಿವರ್ತನ ಯೋಗದ ಮಾಹಿತಿ ನೀಡಲಿದ್ದಾರೆ. ಶಿಬಿರಕ್ಕೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.