ಮಡಿಕೇರಿ, ಆ. 15: ಕೊಡಗು ಜಿಲ್ಲೆಯಾದ್ಯಂತ ನೆರೆಪೀಡಿತ ಪ್ರದೇಶಗಳಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಕಾರ್ಯಕರ್ತರಿಂದ ಮನೆ, ಪ್ರಾರ್ಥನಾ ಮಂದಿರಗಳ ಶುಚೀಕರಣ ಕಾರ್ಯಾಚರಣೆ ನಡೆಯಿತು.
ಜಿಲ್ಲೆಯ ವಿವಿಧ ಶಾಖೆಗಳಿಂದ ಕಾರ್ಯಕರ್ತರ ದಂಡು ನೆರೆ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆಗಿಳಿದರು. ಅಗತ್ಯ ಕಡೆಗಳಲ್ಲಿ ಆಹಾರ, ಅಗತ್ಯ ಸಾಮಗ್ರಿಗಳ ಕಿಟ್ ವಿತರಣೆ ನಡೆಯಿತು. ನೆಲ್ಲಿಹುದಿಕೇರಿ, ಕೊಟ್ಟಮುಡಿ, ಬೇತ್ರಿ ಮುಂತಾದ ಕಡೆಗಳಲ್ಲಿ ನೆರೆಯಿಂದ ಹಾಳುಗೀಡಾದ ಮನೆಗಳನ್ನು ಸ್ವಚ್ಛವಾಗಿಸಿದರು. ನೆಲ್ಲಿಹುದಿಕೇರಿ ಪ್ರದೇಶದ ಶುಚೀಕರಣ ಕಾರ್ಯಾಚರಣೆಯಲ್ಲಿ ಎಸ್‍ಎಸ್‍ಎಫ್ ಜಿಲ್ಲಾ ಉಪಾಧ್ಯಕ್ಷ ಶಾಫಿ ಸಅದಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫಾ, ಸದಸ್ಯರಾದ ರಹೀಮ್ ಹೊಸತೋಟ ಶಾಖೆ ನಾಯಕರುಗಳಾದ ಶಿಹಾಬ್ ತಂಙಳ್, ಮುಸ್ತಫಾ ಝುಹ್ರಿ, ಝುಬೈರ್ ಸಅದಿ, ರಜಾಕ್ ಸಅದಿ, ಫಾರೂಕ್ ಹೊಸೂರ್ ಹಾಗೂ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕರ್ತರನ್ನು ಕಂಡ ಸ್ಥಳೀಯರು ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.