ಗೋಣಿಕೊಪ್ಪಲು, ಆ. 15: ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದ ಜನತೆ ಚೇತರಿಸಿ ಕೊಂಡಿಲ್ಲ. ಆದರೆ ಮಹಿಳೆಯರು ಹಾಗೂ ಪುರುಷರು ತಮ್ಮ ಆರ್ಥಿಕ ಸುಧಾರಣೆಗೆ ಸಂಘ-ಸಂಸ್ಥೆಗಳಿಂದ ವಾರದ, ತಿಂಗಳ ಕಂತಿನಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡಲು ಒತ್ತಾಯದ ಕೂಗು ಕೇಳಿ ಬರುತ್ತಿವೆ. ಜನತೆ ಕಷ್ಟದಲ್ಲಿರುವ ಸಂದರ್ಭ ಈ ರೀತಿಯ ಒತ್ತಾಯಗಳು ಸರಿಯಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿರುವ ಇವರು, ಸಧ್ಯದ ಪರಿಸ್ಥಿತಿಯಲ್ಲಿ ಸಾಲವನ್ನು ಮರು ಪಾವತಿ ಮಾಡಲು ಸಂಬಂಧಿಸಿದ ಸಂಘ-ಸಂಸ್ಥೆಗಳು ಒತ್ತಾಯಿಸಬಾರದು. ಕೆಲವು ತಿಂಗಳುಗಳ ಸಮಯಾವಕಾಶ ನೀಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.