ವೀರಾಜಪೇಟೆ, ಆ.15: ವೀರಾಜಪೇಟೆ ತಾಲೂಕು ಕಚೇರಿಯ ಮುಂದಿನ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣವನ್ನು ತಹಶೀಲ್ದಾರ್ ಪುರಂದರ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪದಂತಹ ದುರಂತಕ್ಕೆ ಪ್ರತಿಯೊಬ್ಬರಲ್ಲಿ ಅಡಗಿರುವ ಸ್ವಾರ್ಥ, ಪರಿಶ್ರಮ ಇಲ್ಲದೆ ಫಲ ಬಯಸುವಿಕೆ, ಅಲಕ್ಷ್ಯತನ ಇವುಗಳೇ ಕಾರಣವಾಗಿದೆ. ಕೊಡಗು ಜಲಪ್ರಳಯದಲ್ಲಿ ನಲುಗಿದ್ದು ವಿಷಾದಕರ. ಇಂತಹ ದುರಂತದ ದಿನಗಳು ಮುಂದೆ ಬಾರದಿರಲಿ ಎಂದು ಪ್ರಾರ್ಥಿಸೋಣ ಎಂದರು.ಸಭೆಯಲ್ಲಿ ಮುಖ್ಯ ಅತಿಥಿಯಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧೋಶ್ ಪೂವಯ್ಯ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬೀಳಗಿ, ಯೂನಿಸೆಪ್ ಸಂಪರ್ಕಾಧಿಕಾರಿ ಪ್ರಭಾಕರ್, ಐ.ಎ.ಎಸ್ ಪ್ರೋಬೆಷನರಿ ಅಧಿಕಾರಿ ಕೇಶ್‍ಕುಮಾರ್, ಎನ್.ಸಿ.ಸಿ ಅಧಿಕಾರಿ ರಾಘವನ್, ಉಪನ್ಯಾಸಕ ವನಿತ್ ಕುಮಾರ್, ಉಪಸ್ಥಿತರಿದ್ದರು.