ವೀರಾಜಪೇಟೆ, ಆ. 14: ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಆರೋಪಕ್ಕಾಗಿ ತಿತಿಮತಿಯ ನೆಹರೂ ಕಾಲೋನಿಯ ಪಣಿ ಎರವರ ಬಾಬು ಅಲಿಯಾಸ್ ಅಣ್ಣು (28) ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಜಿ. ರಮಾ ಅವರು ಐ.ಪಿ.ಸಿ. 376 ರ ಅಡಿಯಲ್ಲಿ 25 ವರ್ಷ ಸಾದಾ ಸಜೆ, ರೂ. 35000 ದಂಡ, ಐ.ಪಿ.ಸಿ. 363ರ ಅಡಿಯಲ್ಲಿ 3 ವರ್ಷ ಸಾದಾ ಸಜೆ ಹಾಗೂ ರೂ. 10,000 ದಂಡ, ಕಲಂ 4 ಮತ್ತು 6 ಪೋಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷ ಸಾದಾ ಸಜೆ ರೂ. 25000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತಾ. 13.3.2018 ರಂದು ರಾತ್ರಿ ಆರೋಪಿ 10 ಗಂಟೆಯ ಸಮಯದಲ್ಲಿ ಈ ಕೃತ್ಯವೆಸಗಿದ್ದು ತೀರ್ಪಿನಂತೆ ರೂ. 35000 ದಂಡ, ಪಾವತಿಸದಿದ್ದರೆ ಮತ್ತೆ 2ವರ್ಷಗಳ ಸಜೆ, ಕಲಂ 6ರ ಪೋಕ್ಸೋ ಕಾಯ್ದೆಯಡಿ ರೂ. 25000 ದಂಡ ಪಾವತಿಸದಿದ್ದರೆ 1 ವರ್ಷಗಳ ಸಜೆಯನ್ನು ಅನುಭವಿಸಬೇಕು. ಐ.ಪಿ.ಸಿ. 363ರ ಅಡಿಯಲ್ಲಿ ರೂ. 10,000 ದಂಡ ಪಾವತಿಸದಿದ್ದರೆ 6 ತಿಂಗಳ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ದಂಡದಲ್ಲಿ ಬರುವ ಹಣದಲ್ಲಿ ಭಾದಿತಳಿಗೆ ರೂ. 60,000 ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.
ಗೋಣಿಕೊಪ್ಪ ವೃತ್ತ ನಿರೀಕ್ಷಕರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಸರಕಾರದ ಪರ ಸಹಾಯಕ ಅಭಿಯೋಜಕ ಡಿ. ನಾರಾಯಣ ವಕಾಲತ್ತು ವಹಿಸಿದ್ದರು.