ಸುಂಟಿಕೊಪ್ಪ, ಆ. 13: ಸರಕಾರಿ ಸೇವೆಗೆ 60 ವರ್ಷ ಎಂದು ಸರಕಾರ ನಿಗದಿಪಡಿಸಿದೆ. ಆದರೆ ಸುಂಟಿಕೊಪ್ಪ ನಾಡು ಕಚೇರಿಯ ಕೆಲ ಸಿಬ್ಬಂದಿಗಳಿಗೆ ಇದು ಅನ್ವಯಿಸದಂತೆ ಕಾಣುತ್ತಿದೆ. 60 ವರ್ಷ ಮೇಲ್ಪಟ್ಟವರೂ ಕಂದಾಯ ಕಚೇರಿಯಲ್ಲಿ ಚಾಕರಿ ನಿರ್ವಹಿಸುತ್ತಿದ್ದಾರೆ.
ಸುಂಟಿಕೊಪ್ಪ ನಾಡು ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಮೂವರು 60 ವರ್ಷಕ್ಕೂ ಮೀರಿದ ವಯೋಮಾನದವರಾಗಿದ್ದಾರೆ. ಆದರೂ ಇವರು ನಿರಂತರ ಸೇವೆಯಲ್ಲಿದ್ದಾರೆ.
ಗ್ರಾಮ ಸಹಾಯಕರನ್ನು ಖಾಯಂಗೊಳಿಸಿ ಅವರಿಗೆ ‘ಡಿ’ ದರ್ಜೆ ನೌಕರಿ ನೀಡುವದಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಆದೇಶ ನೀಡಿದ್ದರೂ ಆದು ಕಾರ್ಯಗತ ಇನ್ನೂ ಆಗಲಿಲ್ಲ ಎನ್ನಲಾಗಿದೆ.
ಹಾಗೆಯೇ ಕುಶಾಲನಗರ ಶನಿವಾರಸಂತೆ, ಸೋಮವಾರಪೇಟೆ ಕಂದಾಯ ಕಚೇರಿಗಳಲ್ಲೂ ಗ್ರಾಮ ಸಹಾಯಕರಾಗಿ 60 ವರ್ಷಕ್ಕೂ ಮೇಲ್ಪಟ್ಟವರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಎಷ್ಟೋ ಮಂದಿ ನಿರುದ್ಯೋಗಿ ಯುವಕರು ಕೆಲಸವಿಲ್ಲದೆ ಅಲೆದಾಡುತ್ತಿದ್ದು, ಅವರುಗಳಿಗೆ ಅವಕಾಶ ಕಲ್ಪಿಸಿಕೊಡಲು ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು ಕಲ್ಲೂರು ಗ್ರಾಮದ ಪುಟ್ಟ ರಾಜು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.