ಸಿದ್ದಾಪುರ, ಆ. 12: ನಂಜರಾಯಪಟ್ಟಣ ಗ್ರಾಮದಲ್ಲಿ ಎಸ್.ಎನ್.ಡಿ.ಪಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ರಾಧ, ಉಪಾಧ್ಯಕ್ಷ ರಾಗಿ ವಿಶ್ವನ್, ಕಾರ್ಯದರ್ಶಿಯಾಗಿ ಸಚಿನ್, ಯೂನಿಯನ್ ಸಮಿತಿಯ ಸದಸ್ಯರಾಗಿ ಪ್ರೇಮಾನಂದ, ಸದಸ್ಯರಾಗಿ ಸವಿನ್, ಸುಜಿತ್, ವಿ. ಎಂ.ಸತೀಶ್, ಅಪ್ಪು, ನವೀನ್, ಟಿ.ಟಿ ಕೌಶಲ್ಯ, ರಾಹುಲ್ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಾಗಿರುವ ನಂಜರಾಯಪಟ್ಟಣ ನಿವಾಸಿ ಸರೋಜಿನಿರವರ ಚಿಕಿತ್ಸೆಗೆ ಎಸ್.ಎನ್.ಡಿ.ಪಿ ಜಿಲ್ಲಾ ಯೂನಿಯನ್ ವತಿಯಿಂದ ಸಂಘದ ಸಂಚಾಲಕÀ ಕೆ.ಎನ್ ವಾಸುರವರು ಸಹಾಯ ಧನದ ಚೆಕ್ ನೀಡಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ನಿರ್ದೇಶಕ ಕಿಶೋರ್ ಕೆ. ವಾಸು ಹಾಗೂ ಇತರರು ಹಾಜರಿದ್ದರು.