ಶನಿವಾರಸಂತೆ, ಆ. 13: ಶನಿವಾರಸಂತೆಯ ಕಾವೇರಿ ರಸ್ತೆಯಲ್ಲಿ ಕಾಫಿ ತೋಟವೊಂದರ 2 ಮರಗಳು ಗಾಳಿ-ಮಳೆಗೆ ಬೇರು ಸಹಿತ ರಸ್ತೆಗೆ ವಾಲಿಕೊಂಡು ಇಂದಿಗೆ 5 ದಿನಗಳಾಗಿದ್ದು, ಪಾದಚಾರಿಗಳ ಮೇಲೆ ಅಥವಾ ವಾಹನಗಳ ಮೇಲೆ ಬಿದ್ದು ದುರಂತ ನಡೆಯುವ ಸಾಧ್ಯತೆ ಇದೆ.
ಸಂಬಂಧಿಸಿದವರು ಗಮನಹರಿಸಿ ಮರ ತೆರವು ಮಾಡಬೇಕಿದೆ ಎಂದು ನಾಗರಿಕರು ಒತ್ತಾಯಿಸಿರುವ ಬಗ್ಗೆ ತಾ. 12 ರ ಶಕ್ತಿ ಪತ್ರಿಕೆಯಲ್ಲಿ ಚಿತ್ರ ಸಹಿತ ಪ್ರಕಟಗೊಂಡಿತ್ತು. ವರದಿಗೆ ಸ್ಪಂದಿಸಿ, ಶನಿವಾರಸಂತೆಯ ಚೆಸ್ಕಾಂ ಅಧಿಕಾರಿ ಹೇಮಂತ್ಕುಮಾರ್ ಹಾಗೂ ಸಿಬ್ಬಂದಿಗಳು ರಸ್ತೆಗೆ ವಾಲಿರುವ ಮರಗಳನ್ನು ಬೆಳಿಗ್ಗೆ ತೆರುವುಗೊಳಿಸಿದ್ದಾರೆ.