ವೀರಾಜಪೇಟೆ, ಆ. 13: ಆಶ್ಲೇಷ ಮಳೆಯ ಅಬ್ಬರಕ್ಕೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ಎಲ್ಲೆಲ್ಲೂ ನೀರೇ ತುಂಬಿಕೊಂಡಿತ್ತು. ಮನೆಗಳೆಲ್ಲ ನೀರು ತುಂಬಿಕೊಂಡು ಮಕ್ಕಳಾದಿಯಾಗಿ ಮನೆ ಮಂದಿಯೆಲ್ಲ ಪರಿಹಾರ ಕೇಂದ್ರಗಳಲ್ಲಿ.., ಬಂಧುಗಳ ಮನೆಗಳಲ್ಲಿ ಆಶ್ರಯ ಪಡೆಯುವಂತಾಯಿತು. ಇದೀಗ ಮಳೆಯ ಅಬ್ಬರ ಕಡಿಮೆಯಾಗಿದ್ದು, ನೀರು ತಗ್ಗಿದೆ. ಮನೆ ಮಂದಿ ತಮ್ಮ ತಮ್ಮ ಮನೆಗಳ, ಅಂಗಡಿಗಳ ಶುದ್ಧೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ.
ರಜೆಯಲ್ಲಿರುವ ಮಕ್ಕಳು ಅಂಗಳಕ್ಕಿಳಿದಿದ್ದಾರೆ. ಇಂಟರ್ನೆಟ್ ಯುಗದಲ್ಲಿ ಎಲ್ಲವನ್ನೂ ಮರೆತಿರುವ ಕಾಲಘಟ್ಟದಲ್ಲಿ ಈ ಪುಟಾಣಿಗಳು ಕಾಗದದ ದೋಣಿ ಮಾಡಿ ನೀರಿನಲ್ಲಿ ಆಟವಾಡುತ್ತಿದ್ದುದು ಆ ಬಾಲ್ಯದ ಆಟವನ್ನು ನೆನಪಿಸುತ್ತಿದೆ.
-ರಜಿತಾ ಕಾರ್ಯಪ್ಪ