ಗುಡ್ಡೆಹೊಸೂರು, ಆ. 12: ಸಮೀಪದ ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಕಾವೇರಿ ನದಿಯಂಚಿನಲ್ಲಿದ್ದ 5 ಮನೆಗಳು ಕಾವೇರಿ ನದಿ ಪ್ರವಾಹದಿಂದ ನೆಲಸಮವಾಗಿದೆ. ಅಲ್ಲಿನ ನಿವಾಸಿಗಳಾದ ಮುಸ್ತಫ, ಸಣ್ಣಯ್ಯ, ಅಣ್ಣಯ್ಯ, ಶಿವಣ್ಣ, ರಾಜಣ್ಣ ಎಂಬವರುಗಳ ಮನೆಗಳು ಸಂಪೂರ್ಣ ಕುಸಿದಿವೆ.
ಮಾದಾಪಟ್ಟಣದಲ್ಲಿ ಹಲವಾರು ಮನೆಗಳು ನೀರಿನಿಂದ ಮುಳುಗಿದ್ದು, ಮಳೆ ಕಡಿಮೆಯಾದ ಹಿನೆÀ್ನಲೆ ಜನರು ತಮ್ಮ ಮನೆಗಳನ್ನು ಮನೆಯಲ್ಲಿದ್ದ ವಸ್ತು ಗಳನ್ನು ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಮಾದಾಪಟ್ಟಣದಲ್ಲಿ ಗುಡ್ಡೆಹೊಸೂರು ಗ್ರಾ.ಪಂ.ಸದಸ್ಯೆ ಪುಷ್ಪ ಅವರ ಮನೆ ಸಂಪೂರ್ಣ ಮುಳುಗಿತ್ತು. ತೆಪ್ಪದ ಕಂಡಿಯ ನಿರಾಶ್ರಿತರು ಗುಡ್ಡೆಹೊಸೂರಿನ ಶಾಲೆಯಲ್ಲಿ ತಂಗಿದ್ದಾರೆ. -ಗಣೇಶ್.