ಮಳೆಯಿಂದ ಜಲಾವೃತಗೊಂಡಿದ್ದ ಕುಶಾಲನಗರ-ಮೈಸೂರು ರಸ್ತೆಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಸುಮಾರು ಒಂದೂವರೆ ಅಡಿಗಳಷ್ಟು ನೀರಿದ್ದು, ಲಾರಿ-ಬಸ್ ಸೇರಿದಂತೆ ವಾಹನ ಸಂಚಾರ ಇಂದು ಆರಂಭವಾಯಿತು. ಕಾವೇರಿ ನದಿಯಲ್ಲಿಯೂ ಮೂರರಿಂದ ನಾಲ್ಕು ಅಡಿ ನೀರು ಕಡಿಮೆಯಾಗಿದೆ. ಕುಶಾಲನಗರ-ಹಾಸನ, ಕೂಡಿಗೆ, ಕಣಿವೆ ರಸ್ತೆಗಳಲ್ಲೂ ವಾಹನ ಸಂಚಾರ ಆರಂಭವಾಗಿದೆ. -ಚಂದ್ರಮೋಹನ್