ಚೆಟ್ಟಳ್ಳಿ:, ಆ. 11: ಸಮೀಪದ ಪೊನ್ನತ್‍ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸದಲ್ಲಿ ಸಾಹಿತ್ಯ ಸಮಾಜವನ್ನು ರೂಪಿಸಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಮದರಸ ಮುಖ್ಯೋಪಾಧ್ಯಾಯ ಸಹದ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಮದರಸ ಅಧ್ಯಾಪಕ ಮುಹಯುದ್ದೀನ್ ಸಖಾಫಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದೆ ಬರಬೇಕು ಎಂದರು.

ಜಲಾಲ್ ಉಸ್ತಾದ್ ಮಾತನಾಡಿ, ಸಾಹಿತ್ಯ ಸಮಾಜದಿಂದ, ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಕಲಾ, ಸಾಂಸ್ಕೃತಿಕ ರಂಗದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.

ಕಳೆದ ವಾರ ನಿಧನರಾದ ವಿದ್ವಾಂಸ ಅಬ್ಬಾಸ್ ಉಸ್ತಾದ್ ಅವರ ಅನುಸ್ಮರಣೆ ಕಾರ್ಯಕ್ರಮ ಮಹಲ್ ಖತೀಬರಾದ ಶಾದುಲಿ ಫೈಝಿ ಅವರ ನೇತೃತ್ವದಲ್ಲಿ ನಡೆಯಿತು. ಮದರಸ ಲೀಡರ್ ಆಗಿ ಶಿಬಿಲ್, ಅಫೀಪ ವಿ.ಎಂ. ಪರಿಸರ ಲೀಡರ್ ಆಗಿ ಆಯ್ಕೆಯಾದರು. ಸವಾದ್ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಸಿದ್ದೀಖ್, ಉಪಾಧ್ಯಕ್ಷರಾಗಿ ಮಿದ್ಲಾಜ್, ಸಹ ಕಾರ್ಯದರ್ಶಿಯಾಗಿ ಫಾರೂಖ್ ಆಯ್ಕೆಯಾಗಿದ್ದಾರೆ.