ಕೂಡಿಗೆ: ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಕೆ.ಪಿ. ಚಂದ್ರಕಲಾ ಅವರ ಮನೆ ಕಾವೇರಿ ನದಿ ನೀರಿನಿಂದ ಜಲಾವೃತಗೊಂಡಿದೆ. ಗುಮ್ಮನಕೊಲ್ಲಿ ಗ್ರಾಮದ ಕಾವೇರಿ ನದಿ ತಟ್ಟದ ಹತ್ತಿರವಿದ್ದ ಮನೆಗೆ ನೀರು ನುಗ್ಗಿದ ಪರಿಣಾಮ ಮನೆ ಮತ್ತು ತೋಟ ಜಲಾವೃತಗೊಂಡಿದೆ. ನೀರು ಅತಿವೇಗವಾಗಿ ನುಗ್ಗಿದ ಪರಿಣಾಮ ಮನೆಯ ಯಾವದೇ ಸಾಮಗ್ರಿಗಳನ್ನು ಸಾಗಾಟ ಮಾಡಲು ಸಾಧ್ಯವಾಗಲಿಲ್ಲ ಎಂದು ಚಂದ್ರಕಲಾ ತಿಳಿಸಿದ್ದಾರೆ.
-ನಾಗರಾಜಶೆಟ್ಟಿ