ಸಿದ್ಧಾಪುರ, ಆ. 11: ಕುಶಾಲನಗರ ವ್ಯಾಪ್ತಿಯ ಪರಿಹಾರ ಕೇಂದ್ರಗಳಿಗೆ ಹಾಗೂ ವಾಲ್ನೂರು ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದ್ದು, ನಿರಾಶ್ರಿತರಿಗೆ ಯಾವದೇ ತೊಂದರೆ ಆಗದಂತೆ ಊಟೋಪಚಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಆರೋಗ್ಯ ಇಲಾಖೆಯಿಂದ ದಾದಿಯರನ್ನು ಆರೋಗ್ಯ ಚಿಕಿತ್ಸೆಗೆ ನಿಯೋಜಿಸಲು ಆದೇಶಿಸಿದರು.ಹಾರಂಗಿ ಅಣೆಕಟ್ಟೆ ಜಲಾನಯನ ಪ್ರದೇಶಕ್ಕೆ ಶಾಸಕ ಅಪ್ಪಚ್ಚುರಂಜನ್ ಖುದ್ದು ಭೆÉೀಟಿ ನೀಡಿ ಪರಿಶೀಲನೆ ಮಾಡಿದರು.ಕಳೆದ ಎರಡು ದಿನಗಳಿಂದ 20 ಸಾವಿರ ಕ್ಯೂಸಕ್ ನೀರನ್ನು ಹರಿಸಲಾಗುತ್ತಿತು. ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಇಂದು ಅಣೆಕಟ್ಟೆಯಿಂದ ನದಿಗೆ ನಾಲ್ಕು ಸಾವಿರ ಕ್ಯೂಸಕ್ ನೀರನ್ನು ಹರಿಸಲಾ ಗುತ್ತಿದೆ. ಶಾಸಕರು ಅಣೆಕಟ್ಟೆಯ ಒಳ ಹರಿವು ಮತ್ತು ಹೊರ ಹರಿವು ಪ್ರಮಾಣದ ಬಗ್ಗೆ ಅಲ್ಲಿ ಅಳವಡಿಸಿರುವ ನೀರಿನ ಅಳತೆಯ ಮಾಪಕವನ್ನು
(ಮೊದಲ ಪುಟದಿಂದ) ಪರೀಕ್ಷಿಸಿ ಮಾಹಿತಿ ಪಡೆದರು.
ಈ ಸಂದರ್ಭ ಕಾವೇರಿ ನೀರಾವರಿ ನಿಗಮ ಅಭಿಯಂತರರಾದ ಟಿ ಮಂಜುನಾಥ, ಸಹಾಯಕ ಅಭಿಯಂತರ ವಿನೋದ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮೇಗೌಡ, ಸಹಾಯಕ ಇಂಜಿನಿಯರ್ ನಾಗರಾಜ್ ಹಾಜರಿದ್ದರು.
ನೆಲ್ಯಹುದಿಕೇರಿ ಮುತ್ತಪ್ಪ ಕಲಾವೇದಿಕೆಯಲ್ಲಿರುವ ಪರಿಹಾರÀ ಕೇಂದ್ರಕ್ಕೆ ಜಿ.ಪಂ. ಸದಸ್ಯೆ ಸುನೀತಾ ಮಂಜುನಾಥ್, ತಾ.ಪಂ. ಸದಸ್ಯೆ ಸುಹಾದ ಆಶ್ರಫ್ ಭೇಟಿ ನೀಡಿ ಪರಿಶೀಲಿಸಿದರು. ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ಕಾರ್ಯದರ್ಶಿ ರವಿ, ಬಿಲ್‍ಕಲೆಕ್ಟರ್ ಮಣಿ ನಿರಾಶ್ರಿತರಿಗೆ ಆಹಾರಧಾನ್ಯ ಇತರೆ ಸೌಲಭ್ಯ ಕಲ್ಪಿಸಲು ಸಹಕಾರ ನೀಡಿದರು.
ನೆಲ್ಯಹುದಿಕೇರಿ ಮುತ್ತಪ್ಪ ಕಲಾವೇದಿಕೆ ಮತ್ತು ಯುವ ಬ್ರಿಗೇಡ್‍ನ ಆಶ್ರಯದಲ್ಲಿ ನೆಲ್ಯಹುದಿಕೇರಿ ಮುತ್ತಪ್ಪ ದೇವರ ಸಭಾಂಗಣದಲ್ಲಿ 60 ಮಂದಿ ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದ ಸ್ಥಳಕ್ಕೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ, ನೆಲ್ಯಹುದಿಕೇರಿ ಮಾಜಿ ಗ್ರಾ.ಪಂ. ಅಧ್ಯಕ್ಷೆ ಮೌಳಿಅನ್ನಮ್ಮ ಅವರುಗಳು ಭೇಟಿ ನೀಡಿದರು.
ವಾಲ್ನೂರು ಹಾಗೂ ನೆಲ್ಲಿಹುದಿಕೇರಿ ವಿಭಾಗದ ಪರಿಹಾರ ಕೇಂದ್ರಗಳಿಗೆ, ಮುಳುಗಡೆಯಾದ ಪ್ರದೇಶಗಳಿಗೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಭೇಟಿ ನೀಡಿ ಪರಿಶೀಲಿಸಿದರು.
ವಾಲ್ನೂರು ಹಿರಿಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ 125 ಮಂದಿ ಆಶ್ರಯ ಪಡೆದಿದ್ದು ವಿದ್ಯುತ್ ಇಲ್ಲದೆ ಕುಡಿಯುವ ನೀರಿನ ಸಮಸ್ಯೆ ಉದ್ಬವಾಗಿದ್ದು, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯಿಂದ ಜನರೇಟರ್ ತರಿಸಲಾಯಿತು. ವಾಲ್ನೂರು ಬಳಿ ಗಿಲ್ಮಿ ಎಸ್ಟೇಟ್ ಮಾಲೀಕರು 1 ಟ್ಯಾಂಕ್ ನೀರನ್ನು ಒದಗಿಸಿದರು.
ವಾಲ್ನೂರು ತ್ಯಾಗತ್ತೂರು ಅಮ್ಮಂಗಾಲ ವಿಭಾಗದ ಕೃಷಿಕರ 400 ಎಕರೆ ಗದ್ದೆ ಕಾಫಿ ಕರಿಮೆಣಸು ಗಿಡ ಜಲಾವೃತಗೊಂಡ ಪ್ರದೇಶಕ್ಕೂ ತಾ.ಪಂ. ಸದಸ್ಯ ಮಣಿ ಉತ್ತಪ್ಪ, ಗ್ರಾ.ಪಂ. ಸದಸ್ಯ ಭುವನೇಂದ್ರ, ಆರ್.ಎಂ.ಸಿ. ಉಪಾಧ್ಯಕ್ಷ ದತ್ತ ವಿಜಯ, ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ನಷ್ಟಕ್ಕೊಳಗಾದ ಕೃಷಿಕರಾದ ಎಂ.ಎನ್. ಶಿವಕುಮಾರ್ ಇತರರು ಡಿಸಿಸಿ ಬ್ಯಾಂಕ್‍ನಿಂದ ಪಡೆದ ಸಾಲವನ್ನು ಬೆಳೆನಷ್ಟದ ಪರಿಣಾಮ 5 ವರ್ಷಕ್ಕೊಮ್ಮೆ ನವೀಕರಿಸಲು ಅವಕಾಶ ಕಲ್ಪಿಸಬೇಕೆಂದು ಬೇಡಿಕೆ ಮುಂದಿಟ್ಟರು. ಈ ಬಗ್ಗೆ ಡಿಸಿಸಿ ಬ್ಯಾಂಕ್‍ನೊಂದಿಗೆ ಚರ್ಚಿಸುವದಾಗಿ ಮಣಿಉತ್ತಪ್ಪ ಭರವಸೆ ನೀಡಿದರು. ಗುಹ್ಯ ಅಗಸ್ತ್ಯೇಶ್ವರ ದೇವಾಲಯ ಮುಳುಗಿ ಹೋಗಿರುವದನ್ನು ಮಣಿಉತ್ತಪ್ಪ ಕಲಾವೇದಿಕೆ ಅಧ್ಯಕ್ಷ ಪ್ರಕಾಶ್ ನೆಲ್ಯಹುದಿಕೇರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಟಿ.ಸಿ. ಅಶೋಕ ಪರಿಶೀಲಿಸಿದರು.
-ನಾಗರಾಜ್ ಶೆಟ್ಟಿ, ಸುಧಿ