ಕೂಡಿಗೆ, ಅ. 10: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇಂದು ಕಾವೇರಿ- ಹಾರಂಗಿ ನದಿಗಳಲ್ಲಿ ನೀರಿನ ಮಟ್ಟ ಹೆÀಚ್ಚಾದಂತೆ ನದಿಯ ನೀರು ಕಣಿವೆಯ ಹತ್ತಿರ ತೂಗು ಸೇತುವೆಯ ಮೇಲೆ ಹರಿಯುತ್ತಿತ್ತು. ಮಧ್ಯಾಹ್ನದ ನಂತರ ನೀರು ಹೆಚ್ಚಾದ ಪರಿಣಾಮ ತೂಗು ಸೇತುವೆಯ ಮೆಟ್ಟಿಲುಗಳು ನೀರಿನಲ್ಲಿ ತೇಲಿಹೋಗಿವೆ. ಅಲ್ಲದೆ ಒಂದು ಭಾಗ ಕಬ್ಬಿಣದ ಸರಳುಗಳು ತುಂಡಾಗಿ ಕೊಚ್ಚಿಹೋಗಿವೆ. ಈ ತೂಗು ಸೇತುವೆಯು ಪಿರಿಯಾಪಟ್ಟಣ ತಾಲೂಕಿನ 10 ಗ್ರಾಮಗಳ ಸಂಪರ್ಕದ ಸೇತುವೆಯಾಗಿದೆ. -ಕೆ.ಕೆ.ಎನ್.ಶೆಟ್ಟಿ