ವೀರಾಜಪೇಟೆ, ಆ. 9: ಪಟ್ಟಣ ಪ್ರದೇಶದಲ್ಲಿ ಅತಿಹೆಚ್ಚಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್‍ಗಳಿಗೆ ತಾಲೂಕು ಆಡಳಿತ ದಿಂದ ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡಲಾಗಿದೆ. ಪಂಚಾಯಿತಿಯ 4 ಸದಸ್ಯರು ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಹಾಗೂ ಫಲಾನುಭವಿಗಳು ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.
ಇದೇ ಸಂದರ್ಭ ಮಾತನಾಡಿದ ಸದಸ್ಯೆ ಸುನಿತ ಆಶಾ ನಮ್ಮ ಎಲ್ಲರ ವಾರ್ಡ್‍ಗಳಲ್ಲಿ ಮನೆಗಳು ಹಾನಿ ಯಾಗಿದೆ. ಶಾಸಕರ ಗಮನಕ್ಕೆ ತಂದು ತಾಲೂಕು ಆಡಳಿತದಿಂದ 120 ಪ್ಲಾಸ್ಟಿಕ್ ಹೊದಿಕೆಗಳನ್ನು ತರಿಸಲಾಗಿದೆ. ಪಟ್ಟಣ ಪಂಚಾಯಿತಿಯ ಇತರೆ ಸದಸ್ಯರು ಮುಂಜಾನೆಯೆ ಬಂದು ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ. ನಮ್ಮ ವಾರ್ಡ್‍ಗಳಿಗೂ ಹೊದಿಕೆಗಳು ಬೇಕು. ಮುಖ್ಯಾಧಿಕಾರಿ ಏಕ ಪಕ್ಷೀಯವಾಗಿ ನಡೆದುಕೊಳ್ಳುತ್ತಿ ದ್ದಾರೆ. ನಾವು ಕೂಡ ಜನರಿಂದ ಆಯ್ಕೆಯಾಗಿ ಬಂದವರು ಎಂದು ಅಸಮಾಧಾನ ತೋಡಿಕೊಂಡರು.
ಪ್ರತಿಭಟನೆಯಲ್ಲಿ ಸದಸ್ಯರಾದ ಸುಭಾಷ್, ಹರ್ಷವರ್ಧನ್, ಸುಶ್ಮಿತಾ, ಯಶೋಧ, ಪೂರ್ಣಿಮಾ ವಾರ್ಡ್ ಸದಸ್ಯರು ಭಾಗಿಯಾಗಿದ್ದರು. ಶಾಸಕ ಕೆ.ಜಿ. ಬೋಪಯ್ಯ ಅವರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಅಸಮಾಧಾನಗೊಳಿಸಿ ಪ್ರತಿಭಟನೆ ಹಿಂಪಡೆದರು.