ಚೆಟ್ಟಳ್ಳಿ, ಆ. 8: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೆರಂಗಿ ಬೆಟ್ಟದ ಮಣಿ ಹಾಗೂ ರವಿಕುಮಾರ್ ಅವರ ವಾಸದ ಮನೆಯ ಮುಂದಿನ ಬರೆಗಳು ಮಳೆಗೆ ಕುಸಿದಿದ್ದು ಮನೆಗಳ ಕುಟುಂಬಸ್ಥರನ್ನು ತೆರವುಗೊಳಿಸಲಾಯಿತು.
ಈ ಸಂದರ್ಭ ಸುಂಟಿಕೊಪ್ಪ ಕಂದಾಯ ಇಲಾಖೆಯ ಉಪತಹಶೀಲ್ದಾರ್ ಶಿವಪ್ಪ, ಗ್ರಾಮ ಲೆಕ್ಕಾಧಿಕಾರಿ ನಸೀಮ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಚಂದ್ರಶೇಖರ್, ಪ್ರಶಾಂತ್, ಶಾಹಿರ, ಗ್ರಾಮ ಸಹಾಯಕರಾದ ಸುಶೀಲ ಹಾರಿದ್ದರು.
-ಕರುಣ್ ಕಾಳಯ್ಯ