ಕೂಡಿಗೆ, ಆ. 7 : ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ನದಿಯಲ್ಲಿ ನೀರಿನ ಹರಿಯುವಿಕೆ ಏರಿಕೆ ಕಂಡಿದೆ. ಹಾರಂಗಿ ಅಣೆಕಟ್ಟೆಯು ಭರ್ತಿಯಾಗಲು ಇನ್ನು 15 ಅಡಿ ಬಾಕಿ ಇದ್ದು, ಇನ್ನೆರಡು ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾದರೆ, ಒಂದು ವಾರದಲ್ಲಿ ಅಣೆಕಟ್ಟೆ ಭರ್ತಿಯಾಗುವ ನಿರೀಕ್ಷೆ ಇದೆ. ಹಾರಂಗಿ ಅಣೆಕಟ್ಟೆಯಲ್ಲಿ 4.43135 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯವಿದ್ದು, ಪ್ರಸ್ತುತ 3.68088 ಟಿಎಂಸಿ ನೀರು ಸಂಗ್ರಹವಾಗಿದೆ. ನದಿ ನೀರಿನ ಮಟ್ಟ 2842.55 ಅಡಿ ಇದ್ದು, ಹಾರಂಗಿ ಅಣೆಕಟ್ಟೆಯಲ್ಲಿ ಇದೀಗ 8926 ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ. ಇನ್ನು ಹಾರಂಗಿ ಜಲಾಶಯ ತುಂಬಲು 15 ಅಡಿ ಬಾಕಿ ಇದೆ. -ಕೆ.ಕೆ.ಎನ್. ಶೆಟ್ಟಿ.