ವೀರಾಜಪೇಟೆ, ಆ. 7: ವೀರಾಜಪೇಟೆ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಾಗರಿಕ ಸಮಿತಿಯು ತಾ. 8ರಂದು (ಇಂದು) ಕೈಗೊಂಡಿದ್ದ 12ರಿಂದ 2 ಗಂಟೆಯವರೆಗೆ ಬಂದ್ ಹಾಗೂ ಪ್ರತಿಭಟನಾ ಮೆರವಣಿಗೆಯನ್ನು ಮುಂದೂಡಲಾಗಿದೆ ಎಂದು ಸಮಿತಿಯ ಪ್ರಮುಖರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್ ತಿಳಿಸಿದ್ದಾರೆ.

ಪಟ್ಟಣದ ಮೂರನೇ ವಾರ್ಡ್ ನಿವಾಸಿಗಳ ಪರವಾಗಿ ರಸ್ತೆ ಅಗಲೀಕರಣವನ್ನು ಮರು ಪರಿಶೀಲಿಸುವಂತೆ ಕೋರಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಪುರಂದರ ಅವರಿಗೆ ನೀಡಿದ ಮನವಿಯ ಮೇರೆ ಮನವಿಯನ್ನು ಸಹಾನುಭೂತಿ ಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ ಎಂದು ರಾಜೇಶ್ ತಿಳಿಸಿದ್ದಾರೆ.

ಕ್ರಮ ಕೈಗೊಳ್ಳುವದಾಗಿ ನೀಡಿದ ಭರವಸೆ ಮೇರೆ ಪ್ರತಿಭಟನೆಯನ್ನು ಮುಂದೂಡಿರುವದಾಗಿ ರಾಜೇಶ್ ತಿಳಿಸಿದ್ದಾರೆ. ತಾ. 4ರಂದು ಇಲ್ಲಿನ ಬೋರೇಗೌಡ ಕಟ್ಟಡದ ಸಭಾಂಗಣದಲ್ಲಿ ಉಚ್ಚ ನ್ಯಾಯಾಲಯದ ವಕೀಲರಾದ ಎನ್.ರವೀಂದ್ರನಾಥ್ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಂದ್, ಪ್ರತಿಭಟನೆಯ ನಿರ್ಧಾರ ಕೈಗೊಳ್ಳಲಾಗಿತ್ತು.