ಕೂಡಿಗೆ, ಆ. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಕಿಗ್ಗಾಲಿ ಕೈಗಾರಿಕಾ ಘಟಕದಿಂದ ಮೂರು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸುಂದರ ನಗರ ಗ್ರಾಮದ ಅರುಣ್, ಶರತ್, ಅಶೋಕ, ಅಲ್‍ಮಿಲ್ ಎಂಬವರು ಕಳ್ಳತನದಲ್ಲಿ ಭಾಗಿಯಾದವರು. ಕಿಗ್ಗಾಲಿ ಘಟಕದವರ ದೂರಿನ ಮೇರೆಗೆ ಬೆನ್ನು ಹತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಡಿದ್ದಾರೆ. ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಸುಮನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮುರುಳೀಧರ್ ಅವರ ಸೂಚನೆ ಮೇರೆಗೆ ವೃತ್ತ ನಿರೀಕ್ಷಕ ಕುಮಾರ ಅರಾಧÀ್ಯ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ ಸೇರಿದಂತೆ ಸಿಬ್ಬಂದಿಗಳಾದ ವಿವೇಕ, ರಮೇಶ, ನಾಗರಾಜು, ಅಜಿತ್, ಚಾಲಕ ರಾಜಣ್ಣ ಕಾರ್ಯಾಚರಣೆಯಲ್ಲಿ ಇದ್ದರು.