ಗೋಣಿಕೊಪ್ಪ ವರದಿ, ಆ. 5: ಹಿರಿಯ ಸಾಹಿತಿ, ಶತಾಯುಷಿ ಪರದಂಡ ಚಂಗಪ್ಪ ಅವರು (102) ನಿಧನರಾದರು. ವೀರಾಜಪೇಟೆಯ ಮನೆಯಲ್ಲಿ ವಯೋಸಾಮಾನ್ಯ ಸಮಸ್ಯೆಯಿಂದ ನಿಧನರಾದ ಚಂಗಪ್ಪ ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 6ರಂದು (ಇಂದು) ಮಧ್ಯಾಹ್ನ ಸ್ವಗ್ರಾಮ ನಾಲಡಿಯಲ್ಲಿ ನಡೆಯಲಿದೆ.
1918 ರಲ್ಲಿ ನಾಲಡಿ ಗ್ರಾಮದ ಪರದಂಡ ಗಣಪತಿ ದಂಪತಿಯ ಮಗನಾಗಿ ಜನಿಸಿದ ಚಂಗಪ್ಪ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. 1941 ರಲ್ಲಿ ತರಬೇತಿ ಮುಗಿಸಿ ಇಂಗ್ಲೀಷರ ವಿರುದ್ದ ಹೋರಾಡಿ ಸೇನೆಯಲ್ಲಿ ಸೇವೆ ಸಲ್ಲಿಸಿದವರು.ಹಾಗೆಯೆ 1990 ರಲ್ಲಿ ಮೊದಲ ಬಾರಿಗೆ (ಮೊದಲ ಪುಟದಿಂದ) ‘ಶ್ರೀ ಇಗ್ಗುತ್ತಪ್ಪ ದೇವರು’ ಮತ್ತು ಶ್ರೀ ಸಿದ್ದಾರೂಡ ದೇವರ ಕಥೆಯನ್ನು ಪುಸ್ತಕ ರೂಪದಲ್ಲಿ ಹೊರ ತಂದರು. 2001 ರಲ್ಲಿ ಇದೇ ಪುಸ್ತಕವನ್ನು ಮರು ಮುದ್ರಿಸಿ ಮಾರಾಟ ಮಾಡಿದ್ದರು. 2003 ರಲ್ಲಿ ‘ಕೊಡಗಿನ ಮೂಲ ನಿವಾಸಿಯರ ಪುರಾಣ ಸಂಸ್ಕøತಿಯ ಪರಿಚಯ’ ಎಂಬ ಪುಸ್ತಕವನ್ನು ಹೊರ ತಂದರು. 2013 ರಲ್ಲಿ ಶ್ರೀ ಇಗ್ಗುತಪ್ಪ ದೇವರು’ ಎಂಬ ಪುಸ್ತಕವನ್ನು ಮರು ಮುದ್ರಿಸಿ ಮಾರಾಟದಲ್ಲಿ ತೊಡಗಿಕೊಂಡಿದ್ದರು. ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಪುಸ್ತಕ ಮಾರಾಟ ಮಾಡಿದ ಕೀರ್ತಿ ಇವರದ್ದು.
ಶ್ರೀ ಇಗ್ಗುತಪ್ಪ ದೇವಸ್ಥಾನದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಅದೇ ದೇವರ ಕಥೆಯನ್ನು ಪುಸ್ತಕವಾಗಿ ಪ್ರಕಟಿಸಿ ಜನರಿಗೆ ಇಗ್ಗುತ್ತಪ್ಪ ಮಹಿಮೆಯನ್ನು ತಿಳಿಸಿದ್ದರು. ಕಾರ್ಯಕ್ರಮವಿರುವ ಕಡೆಗಳಿಗೆ ಖುದ್ದು ತೆರಳಿ ತಮ್ಮ ಪುಸ್ತಕಗಳನ್ನು ಮಾರುವದು ಇವರ ಸಾಹಿತ್ಯ ಪ್ರೇಮಕ್ಕೆ ಸಾಕ್ಷಿಯಾಗಿತ್ತು. ಇಳಿ ವಯಸ್ಸಿನಲ್ಲಿಯೂ ಸಮಾರಂಭಗಳÀಲ್ಲಿ ಪುಸ್ತಕ ಮಾರಾಟ ಮಾಡುವ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು.
-ಸುದ್ದಿಪುತ್ರ.