ಮಡಿಕೇರಿ, ಆ. 5: ಸ್ವಾಯತ್ತ ಕೊಡವ ನೆಲ, ಕೊಡವ ಬುಡಕಟ್ಟು ಕುಲಕ್ಕೆ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸ್ಥಾನಮಾನ, ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆ ಗೊಳಿಸಬೇಕು ಮತ್ತು ಕೊಡವ ಪರಂಪರೆ ಮತ್ತು ಜನಾಂಗೀಯ ಹೆಗ್ಗುರುತನ್ನು ವಿಶ್ವಸಂಸ್ಥೆಯ ``ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್'' ಪಟ್ಟಿಗೆ ಸೇರಿಸಬೇಕೆಂಬ ಹಕ್ಕೊತ್ತಾಯ ಮುಂದಿಟ್ಟು ಸಿ.ಎನ್.ಸಿ. ಸಂಘಟನೆಯ ಎನ್. ಯು. ನಾಚಪ್ಪ ನೇತೃತ್ವದಲ್ಲಿ ದೇವಟ್‍ಪರಂಬ್‍ವಿನಲ್ಲಿ ``ಕಕ್ಕಡ ಪದ್‍ನೆಟ್ಟ್ ನಮ್ಮೆ''ಯ ಪ್ರಯುಕ್ತ ಪುಷ್ಪಾಂಜಲಿ ಯನ್ನು ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಅರೆಯಡ ಗಿರೀಶ್, ಮಂದಪಂಡ ಮನೋಜ್ ಮತ್ತು ಪಟ್ಟಮಾಡ ಕುಶ ಭಾಗವಹಿಸಿದ್ದರು.