ಶ್ರೀಮಂಗಲ, ಆ. 5: ಟಿ-ಶೆಟ್ಟಿಗೇರಿ ದಿನೇ ದಿನೇ ಬೆಳೆಯುತ್ತಿರುವ ಪಟ್ಟಣವಾಗಿದೆ. ಆದ್ದರಿಂದ ಹಗಲು ರಾತ್ರಿ ದಿನನಿತ್ಯ ಪೊಲೀಸ್ ಗಸ್ತು ಮತ್ತು ಪಾರ್ಕಿಂಗ್ ವ್ಯವಸ್ಥೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಟಿ-ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಹೇಳಿದರು.
ಟಿ-ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಟಿ-ಶೆಟ್ಟಿಗೇರಿ ಗ್ರಾ.ಪಂ. ಸಭೆಯಲ್ಲಿ ಅವರು ಸಭೆಯ ಅಧ್ಯಕ್ಷತೆ ವÀಹಿಸಿ ಸಭೆಗೆ ಪೊಲೀಸ್ ಇಲಾಖೆಯ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಶ್ರೀಮಂಗಲ ಎ.ಎಸ್.ಐ ವಸಂತ್ ಕುಮಾರ್ ಅವರಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಟಿ-ಶೆಟ್ಟಿಗೇರಿ ಪಟ್ಟಣದಲ್ಲಿ ಹೆದ್ದಾರಿ ಬದಿಯಲ್ಲಿಯೇ ಮೂರು ಶಾಲೆಗಳಿದ್ದು, ಶಾಲೆ ಬಿಡುವ ಸಮಯದಲ್ಲಿ ಮಕ್ಕಳು ಆತುರದಲ್ಲಿ ರಸ್ತೆಗೆ ಧಾವಿಸಿ ಬರುತ್ತಾರೆ. ಈ ಸಮಯದಲ್ಲಿ ಶಾಲಾ ಮಕ್ಕಳ ಸುರಕ್ಷತೆ ದೃಷ್ಠಿಯಲ್ಲಿ ಪೊಲೀಸ್ ಇಲಾಖೆ ವಾಹನ ಸಂಚಾರದ ವೇಗವನ್ನು ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸುಮಂತ್ ಸೂಚಿಸಿದರು.
ಹರಿಹರ ಗ್ರಾಮದಲ್ಲಿ ಬಹುತೇಕ ಎಲ್ಲಾ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಇದರಿಂದ ತೋಟಗಳಲ್ಲಿ ಬೆಳೆದ ಕಾಫಿ ಕರಿಮೆಣಸು ಫಸಲುಗಳನ್ನು ಕಳವು ಮಾಡಿ, ಕೆಲವು ಕಾರ್ಮಿಕರು ಅಂಗಡಿಗಳಿಗೆ ನೀಡಿ ಮದ್ಯ ಖರೀದಿಸುತ್ತಿದ್ದಾರೆ. ಇದರ ಬಗ್ಗೆ ಅಬಕಾರಿ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೂ “ಅವರು ಮಾರಿಕೊಳ್ಳಲಿ ಬಿಡಿ, ನಿಮಗೇನು ತೊಂದರೆ” ಎಂದು ಹೇಳುತ್ತಿದ್ದಾರೆ. ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಶ್ರೀಮಂಗಲ ಕಂದಾಯ ಪರಿವೀಕ್ಷಕ ಪ್ರಸಕ್ತ ವರ್ಷದ ಮಳೆಯಿಂದ ಉಂಟಾದ ಬೆಳೆ ಹಾನಿಗೆ ಪರಿಹಾರ ಅರ್ಜಿ ಸ್ವೀಕರಿಸಲು ಇದುವರೆಗೆ ಆದೇಶ ಬಂದಿಲ್ಲ. ಕಳೆದ ವರ್ಷದ ಮಳೆಯಿಂದ ಬೆಳೆಹಾನಿ ಅರ್ಜಿಗಳಿಗೆ ಈಗಾಗಲೇ ಪರಿಹಾರ ಪಾವತಿಸ ಲಾಗಿದ್ದು, ಎನ್.ಡಿ. ಆರ್.ಎಫ್. ಮಾನದಂಡದಂತೆ ಬಾಕಿ ಉಳಿದ ಪರಿಹಾರವನ್ನು ಎರಡನೇ ಕಂತಿನಲ್ಲಿ ಪಾವತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗ್ರಾ.ಪಂ. ಸದಸ್ಯ ಮುಕ್ಕಾಟಿರ ಸಂದೀಪ್ ಮಾತನಾಡಿ, ಹರಿಹರ ಸ.ಹಿ.ಪ್ರಾ. ಶಾಲೆಯ ಮೈದಾನದಲ್ಲಿ ರೂ. 5 ಲಕ್ಷ ಮೌಲ್ಯದ ಅಕೇಶಿಯಾ ಮರ ಬೆಳೆದು ನಿಂತಿದ್ದು, ಇದನ್ನು ಕಡಿದು ಮಾರಾಟ ಮಾಡಿ ಶಾಲಾ ಕಟ್ಟಡದ ದುರಸ್ತಿಗೆ ಬಳಸಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಕಳೆದ ಹಲವು ವರ್ಷದಿಂದ ಶಾಲಾ ಅಭಿವೃದ್ದಿ ಮಂಡಳಿ ಪತ್ರ ಬರೆದು ಅನುಮತಿಗೆ ಕೇಳಿದೆ. ಆದರೆ ಇದುವರೆಗೂ ಶಿಕ್ಷಣ ಇಲಾಖೆಯಿಂದ ಅನುಮತಿ ದೊರೆತಿಲ್ಲ ಈ ಬಗ್ಗೆ ಶಿಕ್ಷಣಾಧಿಕಾರಿಯವರು ಕೂಡಲೇ ಖುದ್ದು ಭೆÉೀಟಿ ನೀಡಿ ಅನುಮತಿ ನೀಡುವಂತೆ ಗ್ರಾಮ ಸಭೆಯ ಮೂಲಕ ಆಗ್ರಹಿಸಿದರು.
ರೈತ ಸಂಘದ ಮುಖಂಡ ಅಪ್ಪಚ್ಚಂಗಡ ಮೋಟಯ್ಯ ಮಾತನಾಡಿ, ಹಲವು ಸಮಯದಿಂದ ಎಲ್ಲಿಯೂ ಆರ್.ಟಿ.ಸಿ. ಸಿಗುತ್ತಿಲ್ಲ. ಸರ್ವರ್ ಸಮಸ್ಯೆ ಎಂದು ಹೇಳಲಾಗುತ್ತಿದೆ. ಇದರಿಂದ ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಸದಸ್ಯ ಶಿವುಮಾದಪ್ಪ ಸರ್ಕಾರದ ವಿವಿಧ ಇಲಾಖೆಯಿಂದ ಸೌಲಭ್ಯವನ್ನು ಸರ್ವೆ ನಂ, ಆಧಾರ್ ಕಾರ್ಡ್, ಹಳೆಯ ಆರ್.ಟಿ.ಸಿ ಪಡೆದುಕೊಂಡು ವಿತರಿಸಲು ಇಲಾಖೆಗಳು ಕ್ರಮ ಕೈಗೊಳ್ಳಬೇಕೆಂದರು. ಸೂಚಿಸಿದರು.
ಗ್ರಾಮ ಸಭೆಯ ಆರಂಭದಲ್ಲಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುವiಂತ್ ಅವರು ಪತ್ರಿಕೆ ಹಾಗೂ ಆಕಾಶವಾಣಿ ಮತ್ತು ಬಿತ್ತಿಪತ್ರದ ಮೂಲಕ ಗ್ರಾಮ ಸಭೆಯ ಬಗ್ಗೆ ಮಾಹಿತಿ ನೀಡಿದರೂ, ಸಭೆಗೆ ಸಾರ್ವಜನಿಕರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದಾರೆ. ಗ್ರಾಮ ಸಭೆಯಲ್ಲಿ ಕ್ರಿಯಾ ಯೋಜನೆ ಅಂಗೀಕಾರ ವಾಗಬೇಕು. ವಿವಿಧ ಯೋಜನೆಗೆ ಫಲಾನುಭವಿಗಳ ಆಯ್ಕೆಯಾಗಬೇಕು. ಆದರೆ ಗ್ರ್ರಾಮ ಸಭೆಗೆ ಬರದೆ ನಂತರದಲ್ಲಿ ಗ್ರಾಮ ಪಂಚಾಯಿತಿ ಕಛೇರಿಗೆ ಬಂದು ಸಮಸ್ಯೆಯನ್ನು ಗ್ರಾಮಸ್ಥರು ಹೇಳಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ತಾ.ಪಂ ಸದಸ್ಯೆ ಸರೋಜ, ನೋಡಲ್ ಅಧಿಕಾರಿ ಡಾ. ವಿ.ಜಿ. ಗಿರೀಶ್, ಎ.ಪಿ.ಎಂ.ಸಿ. ಸದಸ್ಯೆ ಬೊಳ್ಳಜೀರ ಸುಶೀಲ, ಗ್ರಾ.ಪಂ ಉಪಾಧ್ಯಕ್ಷೆ ಯಶೋದ, ಸದಸ್ಯರುಗಳಾದ ಚೊಟ್ಟಿಯಂಡ ಮಾಡ ಉದಯ, ಚೆಟ್ಟಂಗಡ ಕರುಂಬಯ್ಯ, ಮುಕ್ಕಾಟಿರ ಸಂದೀಪ್, ಬಾಚೀರ ಜಾನ್ಸಿ, ಪೆಮ್ಮಂಡ ಸಬಿತ, ಉಳುವಂಗಡ ದಮಯಂತಿ, ತಡಿಯಂಗಡ ಮೀನ, ಹೆಚ್.ಎಂ. ಹರೀಶ್ ಕುಮಾರ್, ಕೆಚ್ಚಿ, ಸಿದ್ಧ, ಗೌರಿ, ಚಂದ, ಪಿ.ಡಿ.ಓ ಕವಿತಾ ಹಾಜರಿದ್ದರು.