ಮಡಿಕೇರಿ, ಆ. 5: ಮೂರ್ನಾಡು ಪದವಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಮಹಮ್ಮದ್ ಅನ್ಸರ್ ಶೈಕ್ಷಣಿಕ ವರ್ಷದ ನಾಲ್ಕನೇ ಸೆಮಿಸ್ಟರ್‍ನ ಫೈನಾಷಿಯಲ್ ಎಕೌಂಟ್‍ನಲ್ಲಿ ಉನ್ನತ ಸಾಧನೆಯನ್ನು ಮಾಡಿದ್ದಾರೆ. 150 ಅಂಕಗಳಿಗೆ 150 ಅಂಕಗಳನ್ನು ಗಳಿಸುವ ಮೂಲಕ ಇತರ ವಿದ್ಯಾರ್ಥಿ ಗಳಿಗೆ ಮಾದರಿಯಾಗಿದ್ದಾರೆ. ಈ ಸಾಧನೆಗೆ ಉಪನ್ಯಾಸಕರÀ ಸಹಕಾರ ಹಾಗೂ ಕಠಿಣ ಪರಿಶ್ರಮವೇ ಕಾರಣವೆಂದು ತಿಳಿಸಿದ್ದಾರೆ.