ವೀರಾಜಪೇಟೆ ಕಾವಾಡಿ ಗ್ರಾಮದ ನೆಲ್ಲಮಕ್ಕಡ ಸೋಮಣ್ಣ ಅವರ ಒಡೆತನದ ತೋಟದ ಕೆರೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ತೋಟದ ಮಾಲೀಕರು ನೀಡಿರುವ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವ ಮಹಜರು ನಡೆಸಿದರು. ತಪಾಸಣೆಯ ವೇಳೆ ವ್ಯಕ್ತಿಯ ಬಟ್ಟೆಯಲ್ಲಿ ದೊರಕಿರುವ ಆಧಾರ್, ರೇಷನ್ ಕಾರ್ಡ್ನಲ್ಲಿ ಮೃತರು ವಿ.ತಮ್ಮಯ್ಯ (60) ಹಾತೂರು ಎಂದು ನಮೂದಿಸಿದೆ. ಮೃತ ಶರೀರವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಪ್ರಕರಣವು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತ ಶರೀರವು ಗುರುತು ಸಿಗದ ರೀತಿಯಲ್ಲಿದೆ.