ಮಡಿಕೇರಿ, ಆ. 5: ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, ಕುಟುಂಬ, ಸಮುದಾಯ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಹಿಂಸಾಚಾರಕ್ಕೆ ಒಳಗಾದ ಮಹಿಳೆಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರದ ಅನುದಾನದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ “ಒನ್ ಸ್ಟಾಪ್ ಸೆಂಟರ್” ಪ್ರಾರಂಭಿಸಲು ಉದ್ಧೇಶಿಸಲಾಗಿದೆ. ಇದರಿಂದ ದೈಹಿಕ, ಲೈಂಗಿಕ, ಭಾವನಾತ್ಮಕ, ಮಾನಸಿಕ ಮತ್ತು ಆರ್ಥಿಕ ದುರುಪಯೋಗ ಎದುರಿಸುತ್ತಿರುವ ಮಹಿಳೆಯರಿಗೆ ವಯಸ್ಸು, ವರ್ಗ, ಜಾತಿ, ಶಿಕ್ಷಣದ ಸ್ಥಿತಿ, ವೈವಾಹಿಕ ಸ್ಥಿತಿ, ಜನಾಂಗ ಮತ್ತು ಸಂಸ್ಕøತಿ ಲೆಕ್ಕಿಸದೆ ಬೆಂಬಲ ಮತ್ತು ಪರಿಹಾರದೊಂದಿಗೆ ಅನುಕೂಲವಾಗಲಿದೆ. ಈ “ಒನ್ ಸ್ಟಾಪ್ ಸೆಂಟರ್”ಗೆ ಬಾಹ್ಯ ಮೂಲದಿಂದ ಗೌರವಧನದ ಆಧಾರದಲ್ಲಿ ತಾತ್ಕಾಲಿಕವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಆಡಳಿತಾಧಿಕಾರಿ (ಮಹಿಳಾ ಅಭ್ಯರ್ಥಿಗೆ ಮೀಸಲು) ಒಂದು ಹುದ್ದೆ. ವಿದ್ಯಾರ್ಹತೆ: ಎಲ್ಎಲ್ಬಿ, ಎಂಎಸ್ಡಬ್ಲ್ಯೂ.,್ಠ ಅನುಭವ: ಸರ್ಕಾರಿ, ಸರ್ಕಾರೇತರ ಯೋಜನೆ, ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಟ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು ಮತ್ತು ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ: ರೂ. 25 ಸಾವಿರ
ಕೌನ್ಸೆಲರ್ ಒಂದು ಹುದ್ದೆ (ಮಹಿಳಾ ಅಭ್ಯರ್ಥಿಗೆ ಮೀಸಲು): ವಿದ್ಯಾರ್ಹತೆ: ಎಂಎಸ್ಡಬ್ಲ್ಯೂ, ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಜಿಲ್ಲಾ, ರಾಜ್ಯ ಮಟ್ಟದ ಮೆಂಟಲ್ ಹೆಲ್ತ್ ಇನ್ಸ್ಟಿಟ್ಯೂಟ್, ಕ್ಲಿನಿಕ್ ನಲ್ಲಿ ಕೌನ್ಸಿಲರ್, ಸೈಕೋಥೆರಪಿಸ್ಟ್ ಆಗಿ 3 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 15 ಸಾವಿರ.
ವಿಷಯ ನಿರ್ವಾಹಕರು, ಸಮಾಜ ಸೇವಾ ಕಾರ್ಯಕರ್ತರು (ಮಹಿಳಾ ಅಭ್ಯರ್ಥಿಗಳಿಗೆ ಮೀಸಲು):- ಹುದ್ದೆಗಳ ಸಂಖ್ಯೆ: 3, ವಿದ್ಯಾರ್ಹತೆ: ಎಲ್ಎಲ್ಬಿ, ಎಂಎಸ್ಡಬ್ಲ್ಯೂ, ಸರ್ಕಾರಿ, ಸರ್ಕಾರೇತರ ಯೋಜನೆ, ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಟ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು ಮತ್ತು ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 10 ಸಾವಿರ.
ಪ್ಯಾರಾಲೀಗಲ್ ಪರ್ಸನಲ್, ಲಾಯರ್: (ಮಹಿಳಾ ಅಭ್ಯರ್ಥಿಗೆ ಮೀಸಲು): ಹುದ್ದೆಗಳ ಸಂಖ್ಯೆ 1, ವಿದ್ಯಾರ್ಹತೆ: ಎಲ್ಎಲ್ಬಿ., ಸಮಾಜ ವಿಜ್ಞಾನ ವಿಷಯದಲ್ಲಿ ಪ್ಯಾರಾ ಲೀಗಲ್ ಪದವಿ. ಸರ್ಕಾರಿ, ಸರ್ಕಾರೇತರ ಯೋಜನೆ, ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಟ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಮತ್ತು ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 5 ಸಾವಿರ.
ತಾಂತ್ರಿಕ ಸಿಬ್ಬಂದಿ (ಮಹಿಳೆ/ಪುರುಷ): ಹುದ್ದೆಗಳ ಸಂಖ್ಯೆ: 2, ವಿದ್ಯಾರ್ಹತೆ: ಯಾವದಾದರೊಂದು ಪದವಿಯೊಂದಿಗೆ ಡಿಪ್ಲೋಮಾ ಇನ್ ಕಂಪ್ಯೂಟರ್, ಐಟಿ ಹೊಂದಿರಬೇಕು. ಡಾಟಾ ಮ್ಯಾನೇಜ್ಮೆಂಟ್, ಡಾಕ್ಯುಮೆಂಟೇಷನ್, ವೆಬ್ ಬೇಸ್ಡ್ ರಿಪೋರ್ಟಿಂಗ್, ಜಿಲ್ಲಾ, ರಾಜ್ಯ, ಸರ್ಕಾರೇತರ, ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಗ್ಗೆ ಕನಿಷ್ಟ 3 ವರ್ಷಗಳ ಅನುಭವ ಹೊಂದಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 15 ಸಾವಿರ.
ರಕ್ಷಕರು: (ಮಹಿಳೆ, ಟ್ರಾನ್ಸ್ಜೆಂಡರ್): ಹುದ್ದೆಗಳ ಸಂಖ್ಯೆ 3, ಎಸ್ಎಸ್ಎಲ್ಸಿ., ಸರ್ಕಾರಿ, ಹೆಸರಾಂತ ಸಂಸ್ಥೆಗಳಲ್ಲಿ ಸೆಕ್ಯೂರಿಟಿ ಆಗಿ ಕನಿಷ್ಟ 2 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. 24x7 ರಂತೆ ಶಿಫ್ಟ್ನಲ್ಲಿ ಕೆಲಸ ನಿರ್ವಹಿಸಬೇಕು. 45 ವರ್ಷದೊಳಗಿರಬೇಕು. ಮಾಸಿಕ ರೂ. 8 ಸಾವಿರ.
ಮಹಿಳಾ ಸಹಾಯಕರು, ಸ್ವಚ್ಛತಾಗಾರರು: ಹುದ್ದೆಗಳ ಸಂಖ್ಯೆ: 2 ವಿದ್ಯಾರ್ಹತೆ: 5ನೇ ತರಗತಿ, ಸಹಾಯಕರು, ಸ್ವಚ್ಛತಾಗಾರರಾಗಿ ಕನಿಷ್ಟ 3 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 4500 ನೀಡಲಾಗುವದು. ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 9 ಕೊನೆಯ ದಿನವಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ತಿಳಿಸಿದ್ದಾರೆ.