ಶನಿವಾರಸಂತೆ, ಆ. 5: ಕೊಡ್ಲಿಪೇಟೆ ಶಾಂತಪುರ ಗ್ರಾಮದ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅಮಾನತ್ತುಪಡಿಸಿಕೊಂಡಿರುವ ಮರಳನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆ ರಾತ್ರಿ 2 ಗಂಟೆ ವೇಳೆಗೆ ಶನಿವಾರಸಂತೆ ಪೊಲೀಸರು ಸ್ಥಳಕ್ಕೆ ಧಾಳಿ ನಡೆಸಿ, 1 ಜೆ.ಸಿ.ಬಿ., 2 ಟಿಪ್ಪರ್, 3 ಕಾರು ವಶಪಡಿಸಿಕೊಂಡು 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಬ್ಯಾಡಗೊಟ್ಟ ಗ್ರಾಮದ ಅಮಾನ್, ಆಸೀಫ್, ಕೊಡ್ಲಿಪೇಟೆ ಮುನ್ಸಿಪಾಲಿಟಿಯ ದಿವಾಕರ್, ಜೆ.ಸಿ.ಬಿ. ಚಾಲಕ ಮುರುಗೇಶ ಹಾಗೂ ಸುಹೇಲ್ ಅವರುಗಳನ್ನು ಬಂಧಿಸಿದ್ದು, ಸ್ಥಳದಲ್ಲಿದ್ದ ಇನ್ನು ಮೂವರು ಆರೋಪಿಗಳಾದ ರವಿ, ನಾಗೇಶ್, ಟಿಪ್ಪರ್ ಚಾಲಕ ಪರಾರಿಯಾಗಿದ್ದಾರೆ.