ಮಡಿಕೇರಿ, ಆ. 4: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ಕೊಡಗು ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ ಯೋಜನೆಯಡಿ ಬ್ಯಾಂಕ್ ಸಾಲ ಹಾಗೂ ನಿಗಮದ ಸಹಾಯಧನದೊಂದಿಗೆ ಸೌಲಭ್ಯ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸಕ್ತ (2019-20) ಸಾಲಿನಲ್ಲಿ ಉದ್ಯೋಗಿನಿ ಯೋಜನೆಯಡಿ ಕೊಡಗು ಜಿಲ್ಲೆಗೆ 42 ಭೌತಿಕ ಗುರಿ ಅನುಷ್ಠಾನಗೊಳಿಸಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ನಿಗದಿಪಡಿಸಿದ್ದು, ವಿವಿಧ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆದು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ(ಹಂದಿ ಸಾಕಾಣಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ, ನರ್ಸರಿ, ಬ್ಯೂಟಿ ಪಾರ್ಲರ್, ಟೈಲರಿಂಗ್, ವ್ಯಾಪಾರ) ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು 18 ರಿಂದ 55 ವರ್ಷ ವಯೋಮಿತಿಗೊಳಪಟ್ಟು ಬಡತನ ರೇಖೆಯ ಒಳಪಡುವ ಪಡಿತರ ಚೀಟಿ ಹೊಂದಿದ ಮಹಿಳೆಯರಿಗೆ ಅವಕಾಶವಿರುತ್ತದೆ.

ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಉಪ ನಿರ್ದೇಶಕರ ಕಚೇರಿ ಹಾಗೂ ಜಿಲ್ಲೆಯ ಮೂರು ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ಉದ್ಯೋಗಿನಿ ಯೋಜನೆಯ ಅರ್ಜಿಗಳು ಲಭ್ಯವಿದ್ದು ಅರ್ಹ ಮಹಿಳೆಯರು ಈ ಕಚೇರಿಗಳಿಂದ ಅರ್ಜಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ತಾ. 19 ರೊಳಗೆ ಸಲ್ಲಿಸಬೇಕು.

ಅರ್ಹ ಫಲಾನುಭವಿಗಳು ಒದಗಿಸಬೇಕಾದ ದಾಖಲೆಗಳು: 18 ರಿಂದ 55 ವರ್ಷದೊಳಗಿನ ಮಹಿಳೆಯರಿಗೆ ಆದ್ಯತೆ ನೀಡಲಾಗುವದು. ಪರಿಶಿಷ್ಟ ಜಾತಿ, ಪಂಗಡದ ಮಹಿಳೆಯರಿಗೆ ಘಟಕ ವೆಚ್ಚ ರೂ. 1 ಲಕ್ಷದಿಂದ 3 ಲಕ್ಷ ಹಾಗೂ ಶೇ. 50 ಸಹಾಯಧನ ನೀಡಲಾಗುವದು ಮತ್ತು ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಕ್ಕೆ ಮೀರಬಾರದು. ವಿಧವೆಯರು, ವಿಶೇಷಚೇತನರು, ಸಂಕಷ್ಟ ಮಹಿಳೆ, ಅಲ್ಪಸಂಖ್ಯಾತರು ಮತ್ತು ಇತರ ವರ್ಗದವರಿಗೆ ಘಟಕ ವೆಚ್ಚ ರೂ. 1 ಲಕ್ಷ ದಿಂದ ರೂ. 3 ಲಕ್ಷ ಹಾಗೂ ಶೇ. 30 ಸಹಾಯಧನ ನೀಡಲಾಗುವದು. ಮತ್ತು ಕುಟುಂಬದ ವಾರ್ಷಿಕ ಆದಾಯ ರೂ. 1,50,000ಕ್ಕೆ ಮೀರಬಾರದು. ಜಾತಿ ಪ್ರಮಾಣ ಪತ್ರ, ಆದಾಯ ದೃಡೀಕರಣ ಪತ್ರ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಬಿಪಿಎಲ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಅಳತೆಯ ಫೋಟೋ ಸಲ್ಲಿಸಬೇಕು.

ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಆಸಕ್ತಿ ಇರುವ ಮಹಿಳೆಯರು ಜಿಲ್ಲಾ ವ್ಯವಸ್ಥಾಪಕರ ಕಚೇರಿ/ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್ ಗೇಟ್, ಮೈಸೂರು ರಸ್ತೆ, ಮಡಿಕೇರಿ ದೂ.ಸಂ: 7996368687, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ರೇಸ್ ಕೋರ್ಸ್ ರಸ್ತೆ ಹೊಸ ಬಡಾವಣೆ, ಮಡಿಕೇರಿ ದೂ. 08272-228197, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತಾಲೂಕು ಸ್ತ್ರೀಶಕ್ತಿ ಭವನ, ತಾ.ಪಂ.ಆವರಣ, ಸೋಮವಾರಪೇಟೆ ದೂ. 08276-282281, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಜಿಲ್ಲಾ ಸ್ತ್ರೀಶಕ್ತಿ ಮಾರುಕಟ್ಟೆ ಸಂಕೀರ್ಣ ಕಟ್ಟಡ, ಉಪ ನೋಂದಾವಣಾಧಿಕಾರಿಗಳ ಕಚೇರಿ ಎದುರು, ಪೊನ್ನಂಪೇಟೆ ದೂ. 08274-249788 ನ್ನು ಸಂಪರ್ಕಿಸಬಹುದು.

ವಿದ್ಯಾರ್ಥಿ ವೇತನಕ್ಕೆ

ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2019-20ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ನವೀಕರಣ/ಹೊಸ ಅರ್ಜಿ ಆಹ್ವಾನಿಸಲಾಗಿದೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ (1 ರಿಂದ 10 ನೇ ತರಗತಿ)/ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ (ಪಿಯುಸಿ ಯಿಂದ ಪಿಎಚ್‍ಡಿ) ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ hಣಣಠಿ://ತಿತಿತಿ.sಛಿhoಟಚಿಡಿshiಠಿs.gov.iಟಿ ಮೂಲಕ ಅರ್ಜಿ ಸಲ್ಲಿಸುವದು. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನ. ಮೆಟ್ರಿಕ್ ನಂತರ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 31 ಕೊನೆಯ ದಿನ.

ಅರ್ಜಿಯೊಂದಿಗೆ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಹಿಂದಿನ ವರ್ಷದ ಅಂಕಪಟ್ಟಿ (ಶೇ.50 ರ ಮೇಲ್ಪಟ್ಟು) ಪ್ರಸಕ್ತ ವರ್ಷದ (2019-20) ಶುಲ್ಕ ರಶೀತಿ, ವಿದ್ಯಾರ್ಥಿಯ ಭಾವಚಿತ್ರ, ವಿದ್ಯಾರ್ಥಿಯ ಬ್ಯಾಂಕ್ ಖಾತೆ ಸಂಖ್ಯೆ ಪಾಸ್ ಪುಸ್ತಕ ನಕಲು ಪ್ರತಿ ಹಾಗೂ ಆಧಾರ್ ಕಾರ್ಡ್.

ಹಿಂದಿನ ವರ್ಷದಲ್ಲಿ ಕನಿಷ್ಟ ಶೇ. 50 ಕ್ಕಿಂತ ಹೆಚ್ಚಿನ ಅಂಕದಲ್ಲಿ ಉತ್ತೀರ್ಣರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯದ ಗರಿಷ್ಠ ರೂ. 1 ಲಕ್ಷ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ರೂ. 2 ಲಕ್ಷ, ಮೆಟ್ರಿಕ್ ನಂತರದ ಹಾಗೂ ರೂ. 2.50 ಲಕ್ಷ ಮೆರಿಟ್ ಕಂ ವಿದ್ಯಾರ್ಥಿ ವೇತನಕ್ಕೆ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ರಾಜ್ಯದವರಾಗಿದ್ದು, ಅಲ್ಪಸಂಖ್ಯಾತರ ಸಮುದಾಯದವರಾಗಿರಬೇಕು.

ಮೆಟ್ರಿಕ್ ಪೂರ್ವ ಅರ್ಜಿಗಳ ಒಂದು ಪ್ರತಿಯನ್ನು ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ ಆಯಾಯ ಶಾಲೆಗೆ ಸಲ್ಲಿಸುವದು ಹಾಗೂ ಮೆಟ್ರಿಕ್ ನಂತರ ಮತ್ತು ಮೆರಿಟ್ ಕಂ ಮೀನ್ಸ್ ಅರ್ಜಿಗಳ ಒಂದು ಪ್ರತಿ ಆಯಾಯ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ಕಾಲೇಜು ಇರುವ ತಾಲ್ಲೂಕು ಮಾಹಿತಿ ಕೇಂದ್ರಗಳಿಗೆ ಸಲ್ಲಿಸುವದು.

ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‍ಸೈಟ್ hಣಣಠಿs://goಞಜom.ಞಚಿಡಿ.ಟಿiಛಿ.iಟಿ ನ್ನು ಹಾಗೂ ದೂ. 08272-225528/ 220214 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹೆಚ್.ಡಿ. ಪುಟ್ಟರಾಜು ತಿಳಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ನೀಡಲು

ಮಡಿಕೇರಿ, ಆ.1: 2019ನೇ ಸಾಲಿನಲ್ಲಿ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ / ಸಂಸ್ಥೆಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ನ್ಯಾಯಾಲಯದ ಮುಂಭಾಗ, ಕೋಟೆ ಆವರಣದಲ್ಲಿರುವ ಕಚೇರಿಯಿಂದ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ಅಥವಾ ತಿತಿತಿ.ಜisಚಿbiಟiಣಥಿಚಿಜಿಜಿಚಿiಡಿs.gov.iಟಿ ವೆಬ್‍ಸೈಟ್‍ನಿಂದ ಪಡೆದು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳು (ವೈಯಕ್ತಿಕ ವಿಭಾಗ), ಅರ್ಜಿದಾರ ವ್ಯಕ್ತಿಗಳ/ ಸಂಸ್ಥೆಗಳ ಸ್ವವಿವರ ಹಾಗೂ ಸಾಧನೆಗಳ ಸಾರಾಂಶ ಪೂರಕ ದಾಖಲೆಗಳೊಂದಿಗೆ ಹಾಗೂ ಡ್ರಾಪ್ಟ್ ಸೈಟೆಷನ್ (1 ಪುಟಕ್ಕೆ ಮೀರದಂತೆ) 3 ಪ್ರತಿಗಳಲ್ಲಿ (ತ್ರಿಪ್ರತಿಗಳು) ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ತಾ. 17 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಕಚೇರಿಯ ಸಹಾಯವಾಣಿ ಸಂಖ್ಯೆ. 08272 222830 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.