ಸುಂಟಿಕೊಪ್ಪ, ಆ. 4: ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುವ ಮುನ್ನ ಭತ್ತದ ಕಾಳುಗಳನ್ನು ಉಪ್ಪಿನ ನೀರಿನಲ್ಲಿ ಹಾಕಿದಾಗ ಜೊಳ್ಳು ಹಾಗೂ ಗಟ್ಟಿ ಕಾಳುಗಳು ಪ್ರತ್ಯೇಕಗೊಳ್ಳುತ್ತದೆ. ಉತ್ತಮ ಕಾಳುಗಳನ್ನು ಆರಿಸಿ ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸಿ ಬಟ್ಟೆ ಅಥವಾ ಚೀಲದಲ್ಲಿ ಸುತ್ತಿಟ್ಟರೆ ಮೊಳಕೆ ಬಂದ ಸಸಿಯನ್ನು ಮುಂದಿನ 2 ವರ್ಷದವರೆಗೆ ಸಸಿ ನೆಡಲು ಸಹಕಾರಿಯಾಗಲಿದೆ ಎಂದು ಮಡಿಕೇರಿ ತೋಟಗಾರಿಕಾ ವಿಸ್ತರಣಾ ಘಟಕದ ಬೇಸಾಯ ಶಾಸ್ತ್ರಜ್ಞ ಬಸವಲಿಂಗಯ್ಯ ಮಾಹಿತಿ ನೀಡಿದÀರು.

ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಆಯೋಜಿಸಲಾದ ಬೀಜೋಪಚಾರ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಭತ್ತಗಳಿಗೆ ಬೆಂಕಿ ರೋಗ ಹರಡುತ್ತಿದ್ದು, ಅಂತಹ ಸಂದರ್ಭದಲ್ಲಿ ಕಾರ್ಬನ್ ಡೈಜಿಮ್ ಕ್ರಿಮಿನಾಶಕವನ್ನು ಬಳಸುವದರಿಂದ ರೋಗವನ್ನು ತಪ್ಪಿಸಬಹುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಕಾರ್ಯಕ್ರಮದÀ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಕೃಷಿ ಅಧಿಕಾರಿ ಮನಸ್ವಿ, ಮಡಿಕೇರಿ ತೋಟಗಾರಿಕೆ ಇಲಾಖೆಯ ವಿಜ್ಞಾನಿ ವಿದ್ಯಾಶ್ರಿ, ಸಹಾಯಕ ಕೃಷಿ ಅಧಿಕಾರಿ ಪೊಡನೋಳನ ಎಸ್. ಬೋಪಯ್ಯ ಇದ್ದರು. ನಾಕೂರು, ಕಾನ್‍ಬೈಲ್, ಎಮ್ಮೆಗುಂಡಿ, ಅಂದಗೋವೆ, ಕೊಡಗರಹಳ್ಳಿ, ಕಂಬಿಬಾಣೆ, ಅಂದಗೋವೆ, ಗರ್ವಾಲೆ ಮುಂತಾದ ಗ್ರಾಮಗಳ ರೈತರು ಭಾಗವಹಿಸಿದ್ದರು.