ಸುಂಟಿಕೊಪ್ಪ, ಆ. 4: ಮಧುರಮ್ಮ ಬಡಾವಣೆಯ ರಾಜ್ಯ ಹೆದ್ದಾರಿಯಲ್ಲಿ ಮಾರುತಿ ಓಮ್ನಿ ವ್ಯಾನ್ ನಿಂತ ಬೈಕ್‍ಗೆ ಡಿಕ್ಕಿಯಾಗಿ ಬೈಕ್ ನಜ್ಜುಗುಜ್ಜಾದ ಘಟನೆ ನಡೆದಿದೆ.
ಸುಂಟಿಕೊಪ್ಪದಿಂದ ಮಾದಾಪುರ ಕಡೆಗೆ ತೆರಳುತ್ತಿದ್ದ ಮಾರುತಿ ಓಮ್ನಿ ವ್ಯಾನ್ ಅಮೋಗ್ ಆಟೋ ಎಲೆಕ್ರ್ಟಾನಿಕ್ಸ್ ಮಾಲೀಕ ನಿಲ್ಲಿಸಿದ್ದ ಬೈಕ್‍ಗೆ ಡಿಕ್ಕಿಯಾಗಿದೆ. ಕಾರಿನ ಅಡಿ ಭಾಗಕ್ಕೆ ಸಿಲುಕಿದ ಪರಿಣಾಮ ಬೈಕು ಸಂಪೂರ್ಣ ಜಖಂಗೊಂಡಿದೆ. ವ್ಯಾನ್ ಚಾಲಕ ಮತ್ತೊಬ್ಬನಿಗೆ ತರಬೇತಿ ನೀಡುವ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಸುಮಾರು 40 ಸಾವಿರ ನಷ್ಟ ಸಂಭವಿದೆ ಎಂದು ಬೈಕ್ ಮಾಲೀಕ ತಿಳಿಸಿದ್ದಾರೆ.