ಮಡಿಕೇರಿ, ಆ. 4: ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಪ್ಪಚಂಡ ಪಿ. ದೇವಯ್ಯ ಅವರು ಸರಕಾರಿ ಕೆಲಸದಿಂದ ನಿವೃತ್ತಿ ಹೊಂದಿದರು. ಪಿ.ಕೆ. ಸುಕುಮಾರ ಅವರು 23 ವರ್ಷ ಕರ ವಸೂಲಿಗಾರರಾಗಿ ಕೆಲಸ ಮಾಡಿ ಗ್ರೇಡ್ 2 ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಗೆ ನಿಯೋಜನೆಗೊಂಡಿದ್ದಾರೆ.
ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಇವರಿಬ್ಬರಿಗೂ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ರೀಟಾ ಮುತ್ತಣ್ಣ, ಉಪಾಧ್ಯಕ್ಷೆ ಜಾಜಿ ಸತೀಶ್, ಸದಸ್ಯರುಗಳಾದ ಕೆ.ಕೆ. ಅಯ್ಯಪ್ಪ, ಎಂ.ಡಿ. ಬೋಪಣ್ಣ, ಜಾನ್ಸನ್ ಪಿಂಟೋ, ಪ್ರೇಮಕುಮಾರ, ಬಿ.ಎ. ಆನಂದ, ಬಿ.ಎ. ದೇವಕಿ, ಜಯಮ್ಮ, ನಿಯೋಜಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುಂಡ ಸ್ವಾಮಿ, ಲೆಕ್ಕ ಸಹಾಯಕ ಅಧಿಕಾರಿ ಮುತ್ತುಪಾಂಡಿ, ಗಣಕಯಂತ್ರ ಚಾಲಕಿ ಸಜಿತ, ಗ್ರಂಥಾಲಯ ಪರಿಚಾರಕಿ ಸರಸ್ವತಿ, ಪಂಚಾಯಿತಿ ಸಿಬ್ಬಂದಿ ಗೋಪಾಲ, ಅಪರ್ಣ ಭಾಗವಹಿಸಿದ್ದರು.