ಮಡಿಕೇರಿ, ಆ. 4: ಮಡಿಕೇರಿಯಲ್ಲಿನ ಕೊಡಗು ಶಿಶು ಕಲ್ಯಾಣ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಇನ್ನರ್ ವೀಲ್ ಕ್ಲಬ್ ವತಿಯಿಂದ ಹಬ್ಬಕ್ಕಾಗಿ ಬಳೆಗಳನ್ನು ನೀಡಲಾಯಿತು.
ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳಿಗೆ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಬಳೆಗಳನ್ನು ನೀಡಲಾಯಿತಲ್ಲದೇ ತಾರುಣ್ಯದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಲಾಯಿತು.
ಈ ಸಂದರ್ಭ ಇನ್ನರ್ ವೀಲ್ ಅಧ್ಯಕ್ಷೆ ನಿಶಾ ಮೋಹನ್, ಕಾರ್ಯದರ್ಶಿ ಶಫಾಲಿ ರೈ. ಖಜಾಂಚಿ ನಮಿತಾ ರೈ, ಖಚಾಂಜಿ ಪೂರ್ಣಿಮಾ ರವಿ, ಸದಸ್ಯೆಯರಾದ ಪ್ರಿಯ ಜಗದೀಶ್, ರೂಪಾ ಸುಮಂತ್, ಲಲಿತಾ ರಾಘವನ್, ಲಕ್ಷ್ಮೀ ಈಶ್ವರ ಭಟ್, ಮಲ್ಲಿಗೆ ಪೈ, ಆಗ್ನೇಸ್ ಮುತ್ತಣ್ಣ ಹಾಜರಿದ್ದರು.
ಕುಶಾಲನಗರ: ಕುಶಾಲನಗರ ಇನ್ನರ್ ವೀಲ್ ಕ್ಲಬ್ ವತಿಯಿಂದ “ಮಿಷನ್ ಮಮತಾ” ಎಂಬ ಕಾರ್ಯಕ್ರಮ ನಡೆಯಿತು. ಸ್ಥಳೀಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಇನ್ನರ್ ವೀಲ್ ಸದಸ್ಯರು ದೇಶದಲ್ಲಿ ತಬ್ಬಲಿ ಮಕ್ಕಳನ್ನು ಮುಕ್ತಗೊಳಿಸುವ ಬರಹಗಳನ್ನು ಹೊತ್ತ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು.
ರಾಷ್ಟ್ರೀಯ ಮಟ್ಟದಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ನಡೆಯುತ್ತಿರುವ ಒಂದು ವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಕವಿತಾ ಸಾತಪ್ಪನ್, ಪ್ರಮುಖರಾದ ಚಿತ್ರ, ನೇಹಾ, ಅಶ್ವಿನಿ ರೈ ಮತ್ತಿತರರು ಇದ್ದರು.