ಸುಂಟಿಕೊಪ್ಪ, ಆ. 4: ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಸುಂಟಿಕೊಪ್ಪ ಹೋಬಳಿ ವತಿಯಿಂದ 7ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಆಟಿದ ಪೊರ್ಲು ಆಟಿಡೊಂಜಿ ಗಮ್ಮತ್ತು ಕಾರ್ಯಕ್ರಮ ಸುಂಟಿಕೊಪ್ಪ ನಾಡು ಕೊಡವ ಸಮಾಜದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಶ್ರೀನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಮುಖೇಶ್ ವಹಿಸಿದ್ದರು.

ಸ್ವಜಾತಿ ಬಾಂಧವರು ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸಂಘವನ್ನು ಬಲಿಷ್ಠವಾಗಿ ಕಟ್ಟಲು ಮುಂದೆ ಬರಬೇಕೆಂದು ಮುಖೇಶ್ ಕರೆ ನೀಡಿದರು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಬಿಲ್ಲವ ಸಮಾಜದ ಹಿರಿಯ ನಾಗರಿಕರಾದ ಬಾಬು ಪೂಜಾರಿ ಹಾಗೂ ಇತರರು ನೇರವೇರಿಸಿದರು.

ಶ್ರೀ ನಾರಾಯಣ ಗುರು ಬಿಲ್ಲವ ಸಮಾಜದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಪೂಜಾರಿ ವರದಿ ವಾಚಿಸಿ, ಚಂದ್ರಶೇಖರ ಲೆಕ್ಕಪತ್ರ ಮಂಡಿಸಿ ಕಳೆದ ವರ್ಷ ಸಂತ್ರಸ್ತರಾದ ಬಿಲ್ಲವ ಬಾಂಧವರಿಗೆ 2,35,500 ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಟಿ.ರಮೇಶ್, ದೇಯಿಬೈದೇದಿ ಮಹಿಳಾ ಸಂಘದ ಅಧ್ಯಕ್ಷೆ ಗೀತಾ, ಮಾಜಿ ಅಧ್ಯಕ್ಷೆ ಮಧುನಾಗಪ್ಪ, ಪದಾಧಿಕಾರಿಗಳಾದ ಪುನೀತ್, ತಿಲಕ್, ನಾಗೇಶ್ ಪೂಜಾರಿ, ಸೀನಪ್ಪ, ಪದ್ಮನಾಭ, ಬಾಬು ಮತ್ತಿತರರು ಉಪಸ್ಥಿತರಿದ್ದರು.