ಮಡಿಕೇರಿ, ಆ. 4: ಮಡಿಕೇರಿ ನಗರದ ಬನ್ನಿಮಂಟಪದ ಬಳಿ ಇರುವ ಸ್ವಸ್ತಿಕ್ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಸೋನಾಲ್ ಪೂಜಾರಿ ಆಯ್ಕೆಯಾಗಿದ್ದಾರೆ. ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕುಲದೀಪ್ ಪೂಣಚ್ಚ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಜಯಣ್ಣ ಡಿ., ಕಾರ್ಯಾಧ್ಯಕ್ಷರಾಗಿ ಗಣೇಶ್, ಖಜಾಂಜಿಯಾಗಿ ಸತೀಶ್ ಆಯ್ಕೆಯಾಗಿದ್ದಾರೆ.