ಮಡಿಕೇರಿ, ಆ. 3: ಕುಶಾಲನಗರದ ಸಂಗಮ ಟಿವಿ ಚಾನೆಲ್ನ ಮೊದಲನೇ ವರ್ಷದ ವಾರ್ಷಿಕೋತ್ಸವÀದ ಅಂಗವಾಗಿ ಮಕ್ಕಳಿಗೆ ಹಾಗೂ ಹಿರಿಯರಿಗಾಗಿ ‘ಹೆಜ್ಜೆ-ಗೆಜ್ಜೆ ಸಂಗಮ’ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಗಮ ಟಿವಿಯ ಪ್ರಧಾನ ಸಂಪಾದಕ ಹಾಗೂ ನಿರ್ದೇಶಕ ಹೆಚ್.ಎಂ. ರಘು ಮತ್ತು ಕಾರ್ಯಕ್ರಮ ಸಂಯೋಜಕ ಬಿ.ಸಿ. ಶಂಕರಯ್ಯ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಜ್ಜೆ-ಗೆಜ್ಜೆ ಸಂಗಮ’ಕ್ಕಾಗಿ ತಾ. 11 ರಂದು ಕುಶಾಲನಗರ ಜಿಎಂಪಿ ಶಾಲಾ ಸಭಾಂಗಣದಲ್ಲಿ ಸ್ಪರ್ಧಿಗಳ ಮತ್ತು ತಂಡಗಳ ಆಯ್ಕೆ ನಡೆಯಲಿದ್ದು, ಸ್ಪರ್ಧಾ ಕಾರ್ಯಕ್ರಮವನ್ನು ವಾರ್ಷಿಕೋತ್ಸವದ ದಿನವಾದ ತಾ. 19 ರಂದು ಆಯೋಜಿಸಲಾಗಿದೆ ಎಂದು ತಿಳಿಸಿದರು.
10 ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ನಡೆಯುವ ಭರತನಾಟ್ಯ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ರೂ. 3 ಸಾವಿರ, ದ್ವಿತೀಯ ರೂ. 2 ಸಾವಿರ ಹಾಗೂ ತೃತೀಯ ಬಹುಮಾನ ರೂ. 1 ಸಾವಿರಗಳನ್ನು ನೀಡಲಾಗುವದು. 15 ರಿಂದ 35 ವಯಸ್ಸಿನ ವಿಭಾಗಕ್ಕೆ ಚಲನಚಿತ್ರ ಗೀತೆಗಳ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನವಾಗಿ ರೂ. 5 ಸಾವಿರ, ದ್ವಿತೀಯ ರೂ. 3 ಸಾವಿರ ಹಾಗೂ ತೃತೀಯ ರೂ. 2 ಸಾವಿರ ಬಹುಮಾನ ನೀಡಲಾಗುತ್ತದೆ. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. 1500, ದ್ವಿತೀಯ ರೂ. 1 ಸಾವಿರಗಳಾಗಿದೆ ಎಂದರು.
ವಾರ್ಷಿಕೋತ್ಸವದ ಪ್ರಯುಕ್ತ ಸಂಗಮ ಸಂಚಿಕೆಯನ್ನು ಅನಾವರಣಗೊಳಿಸಲಾಗುತಿದ್ದು, ಆಸಕ್ತ ಲೇಖಕರು ಕವನ, ಕಥೆ, ಕಾದಂಬರಿ ಮತ್ತು ವ್ಯಂಗ್ಯ ಚಿತ್ರಗಳನ್ನು ಸಂಗಮ ಟಿವಿ, ಬಾಪೂಜಿ ಬಡಾವಣೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗ, ಕುಶಾಲನಗರ ಈ ವಿಳಾಸಕ್ಕೆ ಕಳುಹಿಸುವದು. ನೂತನ್ ಮೋಹÀನ್ಕುಮಾರ್ ಮೊ. 9480046161, ಹೆಚ್.ಎಂ. ರಘು 970006244 ನ್ನು ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಮೋಹನ್ಕುಮಾರ್, ಕೆ.ಟಿ. ಶ್ರೀನಿವಾಸ್ ಹಾಗೂ ಜಗದೀಶ್ ಉಪಸ್ಥಿತರಿದ್ದರು.