ವೀರಾಜಪೇಟೆ, ಆ. 3: ಬಿಟ್ಟಂಗಾಲ ಗ್ರಾಮಪಂಚಾಯತಿ ವ್ಯಾಪ್ತಿಯ ನಾಂಗಾಲ ಗ್ರಾಮದ ಉತ್ತಯ್ಯ ಎಂಬವರ ಮನೆಯ ಹಿಂದಿನ ಬರೆ ಕುಸಿದಿದ್ದು. ಮನೆಯ ಛಾವಣಿ ಹಾಗೂ ಗೋಡೆಗೆ ಹಾನಿಯಾಗಿದೆ. ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಪುರಂದರ ಕೆ., ಕಂದಾಯ ಇಲಾಖೆ ಅಧಿಕಾರಿಗಳು, ಬಿಟ್ಟಂಗಾಲ ಪಂಚಾಯತಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.