ಗೋಣಿಕೊಪ್ಪ ವರದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಮ್ಮಲೆಯಲ್ಲಿ 23 ವರ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಸಿ.ಎಂ. ಪಾರ್ವತಿ ಅವರನ್ನು ಟಿ. ಶೆಟ್ಟಿಗೇರಿ ಕ್ಲಸ್ಟರ್ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಕ್ಲಸ್ಟರ್‍ಗೆ ಒಳಪಡುವ 15 ಶಾಲೆಗಳ ಶಿಕ್ಷಕ ವೃಂದ ಪಾಲ್ಗೊಂಡು ಶುಭ ಕೋರಿದರು. ಶಾಲೆ ಮುಖ್ಯ ಶಿಕ್ಷಕಿ ಪದ್ಮಾವತಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್‍ಕುಮಾರ್, ಕ್ಲಸ್ಟರ್ ಶಿಕ್ಷಕಿ ಟಿ.ಕೆ. ವಾಮನ, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್, ಶಿಕ್ಷಕರಾದ ಎಂ.ಪಿ. ಸತ್ಯ, ನಳಿನಿ, ಮಹೇಶ್ ಉಪಸ್ಥಿತರಿದ್ದರು.ಕುಶಾಲನಗರ: ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಟ್ಟರಾಜು ನಿವೃತ್ತಿ ಹೊಂದಿದ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ವೃಂದದಿಂದ ಬೀಳ್ಕೊಡಲಾಯಿತು.
ಕಳೆದ 33 ವರ್ಷಗಳಿಂದ ಸಂಸ್ಥೆಯಲ್ಲಿ ಇತಿಹಾಸ ಉಪನ್ಯಾಸಕರಾಗಿ, ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪುಟ್ಟರಾಜು ಅವರನ್ನು ಕಾಲೇಜು ಆವರಣದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಈ ಸಂದರ್ಭ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜಯವರ್ಧನ, ಪ್ರಾಂಶುಪಾಲ ಪುರುಷೋತ್ತಮ್, ಹಿರಿಯ ಉಪನ್ಯಾಸಕರಾದ ರುದ್ರಪ್ಪ, ಚನ್ನಕೇಶವಮೂರ್ತಿ, ಪ್ರಸನ್ನಮೂರ್ತಿ ಹಾಗೂ ಸಿಬ್ಬಂದಿ ವರ್ಗ ಇದ್ದರು.ಮಡಿಕೇರಿ: ಮೂಲತಃ ಮಕ್ಕಂದೂರಿನ ನಿವಾಸಿ ಲಕ್ಕಪ್ಪನ ಹರಿನಾಥ್‍ಕುಮಾರ್ ಅಂಚೆ ಇಲಾಖೆಯಲ್ಲಿ 39 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಜು. 31 ರಂದು ನಿವೃತ್ತರಾದರು. ಬೀಳ್ಕೊಡುಗೆ ಕಾರ್ಯಕ್ರಮ ಮಡಿಕೇರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ನೆರವೇರಿತು.
ಈ ಸಂದರ್ಭ ಕೊಡಗು ಅಂಚೆ ವಿಭಾಗದ ಉಪ ಅಧೀಕ್ಷಕ ದಯಾನಂದ ದೇವಾಡಿಗ, ಪೋಸ್ಟ್ ಮಾಸ್ಟರ್, ವಿಭಾಗೀಯ ಕಚೇರಿ ಹಾಗೂ ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.ಗೋಣಿಕೊಪ್ಪಲು: ಪೊನ್ನಂಪೇಟೆ ಕ್ಲಸ್ಟರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 17 ವರ್ಷಗಳ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಎ.ಪಿ. ಸಾವಿತ್ರಿ ಅವರನ್ನು ಶಾಲೆಯ ಶಿಕ್ಷಕ ವೃಂದ ಇತ್ತೀಚೆಗೆ ಬೀಳ್ಕೊಟ್ಟರು.
ಈ ಸಂದರ್ಭ ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಶಿಕ್ಷಕರಾದ ಎ.ಎಸ್. ವಾಸುವರ್ಮ, ಎಂ.ಎ. ಝಾನ್ಸಿ, ರೋಸಿû, ಫಿಲೋಮಿನ, ಮಂಗಳಾಂಗಿ, ಗಂಗಾಮಣಿ, ಮಹೇಶ, ಶಕಿಲಾಬಾನು, ನಿಂಗರಾಜು, ಗಂಗಮ್ಮ, ವಿನಿತ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು ಮಡಿಕೇರಿ: ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಸಮನ್ವಯಾಧಿಕಾರಿ ಬೆಟ್ಟನಾಯಕ್ ಅವರನ್ನು ಇಲಾಖೆ ವತಿಯಿಂದ ಬೀಳ್ಕೊಡಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ ಮಾತನಾಡಿ, ಸಹ ಶಿಕ್ಷಕರಾಗಿ, ಉಪ ಪ್ರಾಂಶು ಪಾಲರಾಗಿ, ಡಯಟ್‍ನ ಉಪನ್ಯಾಸಕರಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ವಿವಿಧ ಹಂತಗಳಲ್ಲಿ ತಮ್ಮ ಛಾಪು ಪಡಿಸಿದ ಬೆಟ್ಟನಾಯಕ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಪಾಂಡು, ಸಹಾಯಕ ಶಿಕ್ಷಣಾಧಿಕಾರಿ ಕಾಶೀನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಚೇತನ್, ಸೋಮವಾರಪೇಟೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಇಲಾಖೆಯ ಸಿಬ್ಬಂದಿ ಹಾಜರಿದ್ದರು.