ಮಡಿಕೇರಿ, ಆ. 2: ಬಿಲ್ಲವ ಸಮಾಜ ಸೇವಾ ಸಂಘ ಮಡಿಕೇರಿ ಇವರ ವತಿಯಿಂದ ಪ್ರತಿ ವರ್ಷದಂತೆ ನಮ್ಮ ಆಚಾರ - ವಿಚಾರಗಳನ್ನು ಪ್ರತಿಬಿಂಬಿಸುವ ‘ಆಟಿಕೂಟ’ ತಾ. 11 ರಂದು ಮಡಿಕೇರಿಯ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಆಟಿ ತಿಂಗಳಿನಲ್ಲಿನ ಆಹಾರ ಪದ್ಧತಿಯ ಬಗ್ಗೆ ಪ್ರದರ್ಶನ ಮತ್ತು ಸಾಮೂಹಿಕ ಭೋಜನ ವ್ಯವಸ್ಥೆ ಇರುತ್ತದೆ. ಇದರಲ್ಲಿ ಭಾಗವಹಿಸುವ ಸ್ವಜಾತಿ ಬಂಧುಗಳು ತಾ. 4 ರೊಳಗಾಗಿ ಸಂಘದ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 9448217548ನ್ನು ಸಂಪರ್ಕಿಸಲು ಕೋರಲಾಗಿದೆ.