ಶನಿವಾರಸಂತೆ, ಆ. 1: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರ ಗ್ರಾಮದಲ್ಲಿ 2 ಕಾಡಾನೆಗಳು ವಾರದಿಂದ ತೋಟ - ಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವದಾಗಿ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಗಿನ ಜಾವ ರೈತ ಸಿ.ಎಂ. ಮಲ್ಲರಾಜು ಅವರ ಒಂದು ಎಕರೆ ಗದ್ದೆಗೆ ನುಗ್ಗಿದ ಆನೆಗಳು ನಾಟಿ ಮಾಡಿದ್ದ ಭತ್ತದ ಪೈರನ್ನು ತುಳಿದು ನಾಶಪಡಿಸಿವೆ. ರಾಗಿ ಬೆಳೆಗೂ ಹಾನಿ ಉಂಟುಮಾಡಿವೆ. ಬೆಳೆಗಾರ ಬಿ.ಸಿ. ಜಯಪ್ಪ ಅವರ ಕಾಫಿ ತೋಟಕ್ಕೂ ನುಗ್ಗಿ ಗಿಡಗಳನ್ನು ನಾಶಪಡಿಸಿದೆ.