ವೀರಾಜಪೇಟೆ, ಆ. 1: ವೀರಾಜಪೇಟೆ ಸಮೀಪದ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೀಶ್ವರ ನವಗ್ರಹ ದೇವಾಲಯದಲ್ಲಿ ವರ್ಷಂ ಪ್ರತಿ ಆಚರಿಸುವಂತೆ ಈ ಬಾರಿಯು ತಾ. 3 ರಿಂದ 24 ರವರೆಗೆ ಪ್ರತಿ ಶನಿವಾರ ಶ್ರಾವಣ ಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಚೋಕಂಡ ರಮೇಶ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಶ್ರಾವಣ ಆರಂಭದ ಶ್ರಾವಣ ಶನಿವಾರದ ತಾ. 3 ರಂದು ಬೆಳಿಗ್ಗೆ 7 ಗಂಟೆಗೆ ಗಣ ಹೋಮ, ಅಪರಾಹ್ನ 12.30 ಕ್ಕೆ ನಾಡಿನ ಜನರ ಕ್ಷೇಮಕ್ಕಾಗಿ ಮಹಾಪೂಜೆ, ಬಳಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ಉಳಿದಂತೆ ಪ್ರತಿ ಶನಿವಾರ ನವಗ್ರಹ ಪೂಜೆ, ಶನಿಶಾಂತಿ ಪೂಜೆ, ಜಪ-ತಪ ಇತ್ಯಾದಿ ಪೂಜೆ ನಡೆಸಲಾಗುತ್ತದೆ. ಹೆಚ್ಚಿನ ವಿವರಕ್ಕೆ ಮೊ. 9449504902, 9449359210 ಸಂಪರ್ಕಿಸುವಂತೆ ರಮೇಶ್ ಕೋರಿದ್ದಾರೆ.