ಮಡಿಕೇರಿ, ಆ. 1: ಸೈನಿಕ ಪರಂಪರೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಭಾರತೀಯ ಸೇನೆಗೆ ಜಿಲ್ಲೆಯ ಹಲವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಪುರುಷರ ಸಾಲಿನಲ್ಲಿ ಇದೀಗ ಯುವತಿಯರೂ ಸೇನಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವದು ಕಂಡು ಬರುತ್ತಿದೆ. ಸೇನೆಯ ಮೂರು ವಿಭಾಗಗಳಲ್ಲಿ ಜಿಲ್ಲೆಯ ಹಲವು ಮಹಿಳೆಯರು - ಯುವತಿಯರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪೈಕಿ ಇದೀಗ ಭಾರತೀಯ ವಾಯುಪಡೆಯಲ್ಲಿ ಕಮೀಷನ್ಡ್ ಅಧಿಕಾರಿಯಾಗಿ ಆಯ್ಕೆಗೊಂಡು ವೈದ್ಯಕೀಯ ತರಬೇತಿ ಪಡೆಯುತ್ತಿದ್ದ ಪೊನ್ನಂಪೇಟೆಯ ಡಾ|| ಐನಂಡ ಬಿ. ಕಾವೇರಮ್ಮ ಫ್ಲೈಟ್‍ಲೆಫ್ಟಿನೆಂಟ್ ಆಗಿ ಪದೋನ್ನತಿ ಹೊಂದಿದ್ದಾರೆ.
ವ್ಯೆದ್ಯಕೀಯ ವಿದ್ಯಾಭ್ಯಾಸದ ತರಬೇತಿ ಅವಧಿಯಲ್ಲಿ (IಓಖಿಇಖಓSಊIP) ಭಾರತೀಯ ಸೇನೆ ನಡೆಸಿದ Sಊಔಖಖಿ SಇಖಗಿIಅಇ ಅಔಒಒISSIಔಓ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ವಾಯುಪಡೆಯ ಕಮಿಷನ್ಡ್ ಅಧಿಕಾರಿಯಾಗಿ ಆಯ್ಕೆಯಾಗಿ ತನ್ನ ವ್ಯೆದ್ಯಕೀಯ ತರಬೇತಿಯನ್ನು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಮುಗಿಸಿ, ಇದೀಗ ಫ್ಲೈಟ್ ಲೆಫ್ಟಿನೆಂಟ್ ಆಗಿ ಬಡ್ತಿ ಹೊಂದಿರುತ್ತಾರೆ, ಉತ್ತರ ಪ್ರದೇಶದ ಲಕ್ನೊ ದಲ್ಲಿ ನಡೆದ ಸೇನಾ ತರಬೇತಿಯನ್ನು ಮುಗಿಸಿ (ಒಔಃಅ) ಇದೀಗ ಜೋದ್ ಪುರದ ವಾಯು ನೆಲೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.. ಭಾರತೀಯ ವಾಯುಪಡೆಯ (ಂiಡಿಜಿoಡಿಛಿe) ವೈದ್ಯಕೀಯ ಕ್ಷೇತ್ರದಲ್ಲಿ ಈಕೆ ಏಕೈಕ ಕೊಡವ ಮಹಿಳಾ ವೈದ್ಯಳಾಗಿರುತ್ತಾಳೆ.
ಫ್ಲೈಟ್ ಲೆಫ್ಟಿನೆಂಟ್ ಕಾವೇರಮ್ಮ ಪೊನ್ನಂಪೇಟೆಯ ವ್ಯಾಪಾರೋದ್ಯಮಿ ಹಾಗೂ ಪತ್ರಕರ್ತ ಐನಂಡ ಕೆ. ಬೋಪಣ್ಣ ಹಾಗೂ ಭಾರತಿ ಬೋಪಣ್ಣ ಅವರ ಪುತ್ರಿ ಹಾಗೂ ಚಿಕ್ಕಮುಂಡೂರಿನ ಕಾಫಿ ಬೆಳೆಗಾರ ದಿ ಐನಂಡ,ಎಸ್.ಕಾರ್ಯಪ್ಪ-ಜಾನಕಿಕಾರ್ಯಪ್ಪ ಹಾಗೂ ಗೋಣಿಕೊಪ್ಪಲಿನ ಹಿರಿಯ ಉದ್ಯಮಿ ಮಾಣಿಪಂಡ ಸೋಮಯ್ಯ-ಪಾರ್ವತಿ ಸೋಮಯ್ಯ ಅವರ ಮೊಮ್ಮಗಳು.