ಮಡಿಕೇರಿ, ಆ. 1: ಸರಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದರೂ ನವೆಂಬರ್ 10 ರಂದು ಬೃಹತ್ ಮಟ್ಟದಲ್ಲಿ ಜಿಲ್ಲೆಯಲ್ಲಿ ಎಲ್ಲಾ ಪ್ರಗತಿಪರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಟಿಪ್ಪು ಜಯಂತಿಯನ್ನು ಆಚರಿಸಲಿದ್ದು, ಇದರ ನೇತೃತ್ವವನ್ನು ಎಸ್‍ಡಿಪಿಐ ಪಕ್ಷವೇ ವಹಿಸುತ್ತದೆ ಎಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್. ಅಬೂಬಕ್ಕರ್ ತಿಳಿಸಿದ್ದಾರೆ.

ಸರಕಾರ ತಕ್ಷಣ ಟಿಪ್ಪು ಜಯಂತಿ ರದ್ದತಿ ಆದೇಶವನ್ನು ಹಿಂದಕ್ಕೆ ಪಡೆದು ಟಿಪ್ಪು ಸುಲ್ತಾನರ ಆಡಳಿತ ಸುಧಾರಣೆಯನ್ನು ಅಧ್ಯಯನ ಮಾಡಲು ಸರಕಾರವೇ ಪೀಠ ರಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.