ಮಡಿಕೇರಿ, ಜು. 31: ನಗರದ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ನೂತನ ಅಧ್ಯಕ್ಷರಾಗಿ ಹೆಚ್.ಎಲ್. ಯೋಗೇಶ್, ಪ್ರಧಾನ ಕಾರ್ಯದರ್ಶಿಯಾಗಿ ವಿ.ಬಿ. ಬ್ರಿಜೇಶ್ ಹಾಗೂ ಕೋಶಾಧಿಕಾರಿಯಾಗಿ ಕೆ.ಪಿ. ಜಗತ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಶುಶಾಂತ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ನಡೆದ ಮಂಡಳಿಯ ವಾರ್ಷಿಕ ಸಭೆಯಲ್ಲಿ 44 ನೇ ವರ್ಷದ ದಸರಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶುಶಾಂತ್ ನಾಯಕ್, ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ದಸರಾ ಸಮಿತಿ ಕೂಡ ಅನೇಕ ಸವಾಲುಗಳನ್ನು ಎದುರಿಸಿದೆ. ಇದರ ನಡುವೆಯೂ ಎಲ್ಲರ ಸಹಕಾರದಿಂದ ಜನಮೆಚ್ಚುಗೆಯ ಮಂಟಪ ತಯಾರಿಸಲಾಯಿತು ಎಂದರು.
ಈ ವರ್ಷ ಅದ್ಧೂರಿಯಾಗಿ ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ವರ್ಣರಂಜಿತವಾಗಿ ಮಂಟಪವನ್ನು ಸಿದ್ಧಗೊಳಿಸಬೇಕಾಗಿದೆ. ಇದಕ್ಕೆ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಶ್ರಮ ಅಗತ್ಯವಾಗಿದ್ದು, ಬಹುಮಾನ ಗೆಲ್ಲುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸೋಣವೆಂದರು.
ಕೋಶಾಧಿಕಾರಿ ಕಾರ್ತಿಕ್ ಅವರು ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಗೌರವ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಜಿ.ಸಿ. ಜಗದೀಶ್, ಡಿ.ಎನ್. ಅನಿಲ್, ಚೊಟ್ಟೆರ ನಾಚಪ್ಪ, ಡಿಶು ಪೂಜಾರಿ, ಮಂಜುನಾಥ, ರವಿನ್ ಕುಮಾರ್, ಸದಾ ಮುದ್ದಪ್ಪ, ಎಂ.ಯಸ್. ದಿನೇಶ್, ಪ್ರಸಾದ್ ಆಚಾರ್ಯ ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಬಿ.ಕೆ. ಜಗದೀಶ್, ಜಿ.ಯಂ. ಸತೀಶ್ ಪೈ, ಪಿ.ಜಿ. ಮಂಜುನಾಥ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.